*ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರಿಗೆ ಲೋಕಭವನದಲ್ಲಿ ಗೌರವ ಸತ್ಕಾರ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು: ಕರ್ನಾಟಕದ ಪದ್ಮ ಪುರಸ್ಕೃತರ ಗೌರವಾರ್ಥ ಬೆಂಗಳೂರಿನ ಲೋಕಭವನದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ವಿಶೇಷ ಔತಣಕೂಟವನ್ನು ಏರ್ಪಡಿಸಿ, ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಪದ್ಮ ಪುರಸ್ಕೃತರನ್ನು ಆತ್ಮೀಯವಾಗಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಕೆಎಲ್‌ಇ ಕಾಹೇರ್ ಕುಲಾಧಿಪತಿ ಪದ್ಮಶ್ರೀ ಡಾ. ಪ್ರಭಾಕರ ಕೋರೆ ಅವರು ಪಾಲ್ಗೊಂಡು ಗೌರವ ಸ್ವೀಕರಿಸಿದರು. ಶಿಕ್ಷಣ, ಆರೋಗ್ಯ, ಸಾಮಾಜಿಕ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಡಾ. ಪ್ರಭಾಕರ ಕೋರೆ ಅವರ ಸೇವೆಯನ್ನು ರಾಜ್ಯಪಾಲರು ಅಭಿನಂದಿಸಿದರು.

ಕರ್ನಾಟಕದ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಡಾ. ಪ್ರಭಾಕರ ಕೋರೆ ಅವರು ಸಲ್ಲಿಸಿರುವ ದೀರ್ಘಕಾಲದ ಸೇವೆ, ಗ್ರಾಮೀಣ ಹಾಗೂ ಬಡ ಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ವಹಿಸಿರುವ ಪಾತ್ರ ಹಾಗೂ ಕೆಎಲ್‌ಇ ಸಂಸ್ಥೆಯ ಮೂಲಕ ರಾಜ್ಯದ ಶೈಕ್ಷಣಿಕ ಪ್ರಗತಿಗೆ ನೀಡಿರುವ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಸಲೀಂ ಅಹಮದ್ ಹಾಗೂ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಜಿ. ಎಸ್. ಪಾಟೀಲ ಅವರು ಉಪಸ್ಥಿತರಿದ್ದರು. ರಾಜ್ಯದ ವಿವಿಧ ಕ್ಷೇತ್ರಗಳ ಪದ್ಮ ಪುರಸ್ಕೃತರು, ಗಣ್ಯರು ಹಾಗೂ ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ. ಪ್ರಭಾಕರ ಕೋರೆ ಅವರೊಂದಿಗೆ ಶಾಸಕ ಗಣೇಶ ಹುಕ್ಕೇರಿ, ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಅಜಿತ್ ದೇಸಾಯಿ, ಭರತ ಬನವಣೆ, ಪರಸಗೌಡ ಪಾಟೀಲ, ಸುರೇಶ ಪಾಟೀಲ, ಶ್ರೀಮತಿ ಆಶಾ ಕೋರೆ, ಪ್ರೀತಿ ಕೋರೆ ದೊಡ್ಡವಾಡ ಹಾಗೂ ದೀಪ್ತಿ ಆರಾಧ್ಯ, ಅವಿನಾಶ್ ಆರಾಧ್ಯ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರು ಉಪಸ್ಥಿತರಿದ್ದರು.
पद्मश्री डॉ. प्रभाकर कोरे यांचा लोकभवनात गौरव सत्कार
बेंगळुरू : कर्नाटकातील पद्म पुरस्कार विजेत्यांच्या सन्मानार्थ बेंगळुरू येथील लोकभवनात राज्यपाल श्री. थावरचंद गेहलोत यांनी विशेष स्नेहभोजनाचे आयोजन केले. यावेळी राज्यातील विविध क्षेत्रांत उल्लेखनीय कार्य करणाऱ्या पद्म पुरस्कार विजेत्यांचा राज्यपालांच्या हस्ते आत्मीयतेने सत्कार करण्यात आला.
या विशेष कार्यक्रमास केएलई काहेरचे कुलाधिपती पद्मश्री डॉ. प्रभाकर कोरे यांनी उपस्थित राहून गौरव स्वीकारला. शिक्षण, आरोग्य आणि सामाजिक सेवा या क्षेत्रांसह विविध क्षेत्रांच्या विकासासाठी डॉ. प्रभाकर कोरे यांनी दिलेल्या उल्लेखनीय योगदानाबद्दल राज्यपालांनी त्यांचे अभिनंदन केले.
कर्नाटकाच्या शैक्षणिक व सामाजिक क्षेत्रात डॉ. प्रभाकर कोरे यांनी केलेल्या प्रदीर्घ आणि उल्लेखनीय कार्याचा यावेळी गौरव करण्यात आला. ग्रामीण व आर्थिकदृष्ट्या दुर्बल घटकांपर्यंत दर्जेदार शिक्षण व आरोग्यसेवा पोहोचविण्यासाठी त्यांनी बजावलेली भूमिका तसेच केएलई संस्थेच्या माध्यमातून राज्याच्या शैक्षणिक प्रगतीला दिलेले योगदान यावेळी विशेषत्वाने अधोरेखित करण्यात आले.
कार्यक्रमास कर्नाटक विधान परिषदेचे सभापती श्री. सलीम अहमद तसेच कर्नाटक विधानसभेचे अध्यक्ष श्री. जी. एस. पाटील उपस्थित होते. यावेळी राज्यातील विविध क्षेत्रांतील पद्म पुरस्कार विजेते, मान्यवर आणि निमंत्रित पाहुणे उपस्थित होते.
पद्मश्री डॉ. प्रभाकर कोरे यांच्यासोबत आमदार गणेश हुक्केरी, चिदानंद कोरे साखर कारखान्याचे अध्यक्ष मल्लिकार्जुन कोरे, अजित देसाई, भरत बनवणे, परसगौडा पाटील, सुरेश पाटील, श्रीमती आशा कोरे, प्रीती कोरे दोडवाड, दीप्ती आराध्य, अविनाश आराध्य यांच्यासह कुटुंबीय, मित्रपरिवार आणि निकटवर्तीय उपस्थित होते.
Padma Shri Dr. Prabhakar Kore Felicitated at Lok Bhavan in Bengaluru
Bengaluru: Karnataka Governor Shri Thawar Chand Gehlot hosted a special dinner at Lok Bhavan, Bengaluru, in honour of Padma awardees from Karnataka who have made significant contributions in various fields. The distinguished awardees were warmly felicitated on the occasion.
KLE KAHER Chancellor and Padma Shri Dr. Prabhakar Kore attended the programme and received the honour. The Governor congratulated Dr. Prabhakar Kore for his distinguished and sustained contributions to education, healthcare, social service and the overall development of society.
On the occasion, Dr. Prabhakar Kore’s long-standing contribution to the educational and social development of Karnataka was recalled. His efforts in extending quality education and healthcare services to rural communities and economically weaker sections, along with his significant contribution to the educational advancement of the state through the KLE institutions, were particularly appreciated.
The programme was attended by Shri Saleem Ahmed, Chairman of the Karnataka Legislative Council, and Shri G. S. Patil, Speaker of the Karnataka Legislative Assembly, along with Padma awardees from various fields, dignitaries and distinguished guests.
Along with Dr. Prabhakar Kore, MLA Ganesh Hukkeri, Mallikarjun Kore, Chairman of Chidanand Kore Sugar Factory, Ajit Desai, Bharat Banavane, Parasagouda Patil, Suresh Patil, Smt. Asha Kore, Preethi Kore Dodwad, Deepti Aradhya and Avinash Aradhya, besides family members, friends and close associates, were present on the occasion.
