Kannada NewsKarnataka NewsLatest
*BREAKING: ಕೆಮಿಕಲ್ ಮಿಶ್ರಿತ ಅಡಿಕೆ ಸಾಗಾಟ: 10 ಟನ್ ಅಡಿಕೆ ವಶಕ್ಕೆ ಪಡೆದ ಆಹಾರ ಸುರಕ್ಷತಾ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ: ಕೋಲ್ಕತ್ತಾದಿಂದ ಬೆಂಗಳೂರಿಗೆ ಕೆಮಿಕಲ್ ಮಿಶ್ರಿತ ಬಣ್ಣದ ಅಡಿಕೆ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಅಪಾರ ಪ್ರಮಣದ ಅಡಿಕೆ ವಶಕ್ಕೆ ಪಡೆದಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ನಂಗಲಿ ಬಳಿ ಕಂಟೇನರ್ ನಲ್ಲಿ ಸಾಗಿಸುತ್ತಿದ್ದ ಅಡಿಕೆಗಳನ್ನು ಅಧಿಕಾರಿಗಳು ಹಾಗೂ ಪೊಲೀಸರು ಜಪ್ತಿ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿದ ಅಧಿಕಾರಿಗಳಿಗೆ ನಾಲ್ಕು ರೀತಿಯ ಕೆಮಿಕಲ್ ಮಿಶ್ರಿತ ಅಡಿಕೆ ಪತ್ತೆಯಾಗಿದೆ.
ಲಕ್ಷ ಲಕ್ಷ ಮೌಲ್ಯದ ಹತ್ತು ಟನ್ ಅಡಿಕೆಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಈ ಅಡಿಕೆಗಳನ್ನು ಕೋಲ್ಕತ್ತಾದಿಂದ ಬೆಂಗಳೂರಿಗೆ ತರಲಾಗುತ್ತಿತ್ತು ಎಂದು ತಿಳಿದುಬಂದಿದೆ.


