CrimeLatestNationalPolitics

*ಮಹಿಳೆ ಮೇಲೆ ಗ್ಯಾಂಗ್ ರೇಪ್: ಬಿಜೆಪಿ ಮಾಜಿ ಶಾಸಕನ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: ವಿವಾಹಿತ ಮಹಿಳೆ ಮೇಲೆ ಗ್ಯಾಂಗ್ ರೇಪ್ ಮಾಡಿದ ಆರೋಪದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಹಾಗೂ ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೋರ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

22 ವರ್ಷದ ಮಹಿಳೆ ಮೇಲೆ ಗ್ಯಾಅಂಗ್ ರೇಪ್ ಆರೋಪ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕ ಸದಾನಂದ ದಾತೆ ಅವರ ನಿರ್ದೇಶನದ ಮೇರೆಗೆ, ಕಲ್ಯಾಣ್ ಪಶ್ಚಿಮ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ನರೇಂದ್ರ ಪವಾರ್ ಮತ್ತು ಪೊಲೀಸ್ ಸಿಬ್ಬಂದಿ ಶೈಲೇಶ್ ಪಾಟೀಲ್ ವಿರುದ್ಧ ಪಢ್ಘಾ ಪೊಲೀಸ್ ಠಾನೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

Home add -Advt

ಸಂತ್ರಸ್ತೆ ತನ್ನ ಪತಿಯೊಂದಿಗೆ ಕಲ್ಯಾಣ್‌ನಲ್ಲಿ ವಾಸಿಸುತ್ತಿದ್ದರು. ಕೌಟುಂಬಿಕ ವಿವಾದ ಬಗೆಹರಿಸಲು ಸಹಾಯ ಮಾಡುವಂತೆ ಮಾಜಿ ಶಾಸಕ ನರೇಂದ್ರ ಪವಾರ್ ಅವರನ್ನು ಸಂತ್ರಸ್ತೆ ಭೇಟಿಯಾಗಿದ್ದರು. ಸೆಪ್ಟೆಂಬರ್ 13ರಂದು ಸಹಾಯ ಮಾಡುವ ನೆಪದಲ್ಲಿ ನರೇಂದ್ರ ಪವಾರ್ ಆಕೆಯನ್ನು ಕಲ್ಯಾಣ್‌ನಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡಿದ್ದಾರೆ. ಬಳಿಕ ಭಿವಂಡಿ ತಾಲೂಕಿನ ಬಾಪಗಾಂವ್ ಗ್ರಾಮದ ಫಾರ್ಮ್‌ ಹೌಸ್‌ಗೆ ಕರೆದೊಯ್ದಿದ್ದಾರೆ ಈ ವೇಳೆ ಚಾಕು ತೋರಿಸಿ ಬೆದರಿಕೆಯೊಡ್ಡಿ ತನ್ನ ಮೇಲೆ ಅತ್ಯಾಅಚಾರವೆಸಗಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

ನರೇಂದ್ರ ಪವಾರ್ ಬಳಿಕ ಶೈಲೇಶ್ ಪಾಟೀಲ್ ಕೂಡ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ಹಾಗೂ ಪೊಲೀಸ್ ಸಿಬ್ಬಂದಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.


Related Articles

Back to top button