Kannada NewsKarnataka NewsLatestNationalTech

*ಐಫೋನ್ 18 ಪ್ರೋ ಫೋನ್​ ಬಿಡುಗಡೆ: ಮಳಿಗೆಗಳ ಮುಂದೆ ಮುಗಿ ಬಿದ್ದ ಜನರು*

ಪ್ರಗತಿವಾಹಿನಿ ಸುದ್ದಿ: ಆ್ಯಪಲ್‌ನ ಹೊಸ ಐಫೋನ್ 18 ಪ್ರೋ ಮತ್ತು ಪ್ರೋ ಮ್ಯಾಕ್ಸ್ ಮಾದರಿಗಳು ಇಂದು ಭಾರತದಲ್ಲಿ ಬಿಡುಗಡೆಯಾಗಿವೆ. ಈ ಹಿನ್ನೆಲೆಯಲ್ಲಿ ಮಹಾಅನಗರಿಗಳಲ್ಲಿ ಆಪಲ್ ಸ್ಟೋರ್ ಗಳ ಮುಂದೆ ಜನರು ಮುಗಿ ಬಿದ್ದಿದ್ದಾರೆ.

Home add -Advt

ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿರುವ ಆ್ಯಪಲ್ ಮಳಿಗೆಗಳ ಮುಂದೆ ಐಫೋನ್ ಪ್ರಿಯರು ಸಾಲುಗಟ್ಟಿ ನಿಂತಿದ್ದಾರೆ. ಮಳಿಗೆಗಳು ಓಪನ್ ಆಗುವ ಮೊದೇ ಮುಂಜಾನೆಯಿಂದಲೇ ಸ್ಟೋರ್ ಗಳ ಮುಂದೆ ಉದ್ದನೆಯ ಸರಿತಿ ಸಾಲು ಕಂಡು ಬಂದಿದ್ದು, ಹಬ್ಬದ ವಾತಾವರಣದಲ್ಲಿ ಗ್ರಾಹಕರು ಮೊಬೈಲ್ ಖರೀದಿಗೆ ಮುಗಿ ಬಿದ್ದಿದ್ದಾರೆ.

ಸೆಪ್ಟೆಂಬರ್ 12ರಿಂದ ಹೊಸ ಐಫೋನ್ ಗಳ ಪ್ರೀ-ಆರ್ಡರ್‌ ಬುಕ್ಕಿಂಗ್ ಆರಂಭವಾಗಿತ್ತು. ಐಫೋನ್ 18 ಪ್ರೋ ಬೆಲೆ 1,64,900 ರೂ.ನಿಂದ ಆರಂಭವಾಗಿದೆ. ಬುಕಿಂಗ್ ಮಾಡಿದವರಿಗೆ ಇಂದು ಫೋನ್ ಪಡೆಯುವ ಸಂಭ್ರಮ.

ಬೆಂಗಳೂರಿನ ಹೆಬ್ಬಾಳದಲ್ಲಿರುವ ಫೀನಿಕ್ಸ್ ಮಾಲ್​ನಲ್ಲಿರುವ ಆ್ಯಪಲ್ ಸ್ಟೋರ್​ನ ಸಿಬ್ಬಂದಿ ಇಂದು ಗ್ರಾಹಕರನ್ನು ಕರತಾಡನ ಮತ್ತು ಹರ್ಷೋದ್ಗಾರಗಳ ಮೂಲಕ ಬರಮಾಡಿಕೊಂಡಿದ್ದು ರಂಜನೀಯ ಎನಿಸಿತು. ಗ್ರಾಹಕರೂ ಕೂಡ ಬೆಳ್ಳಂಬೆಳಗ್ಗೆಯೇ ಸರದಿಯಲ್ಲಿ ನಿಂತು ಫೋನ್ ಪಡೆಯುವ ತವಕದಲ್ಲಿ ಇದ್ದರು.

ದೆಹಲಿ, ಮುಂಬೈ, ಪುಣೆ ಮತ್ತು ನೋಯಿಡಾದಲ್ಲಿರುವ ಆ್ಯಪಲ್ ರೀಟೇಲ್ ಸ್ಟೋರ್​ಗಳಲ್ಲೂ ಇದೇ ರೀತಿಯ ವಾತಾವರಣ ಕಂಡುಬಂದಿದೆ.


Related Articles

Back to top button