Film & EntertainmentKannada NewsKarnataka NewsLatest

*ಬಿಗ್‌ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ*: *ಕಣ್ಣೀರಿಟ್ಟ ಕಿರಣ್ ಶಾಸ್ತ್ರಿ*

ಪ್ರಗತಿವಾಹಿನಿ ಸುದ್ದಿ: ದಸರಾ ಹಬ್ಬದ ಸಂಭ್ರಮದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್ 13ರ ಮನೆಗೆ ಎಂಟ್ರಿ ಕೊಟ್ಟಿದ್ದ ಅಗ್ನಿಪರೀಕ್ಷೆ ಖ್ಯಾತಿಯ ಕುಮಾರಿ ಇದೀಗ ಮನೆಯಿಂದ ಹೊರಬಂದಿದ್ದಾರೆ. ತಮ್ಮ ನೇರ ಮಾತು ಮತ್ತು ಸ್ಪಷ್ಟ ನಿಲುವುಗಳ ಮೂಲಕ ಗಮನ ಸೆಳೆದಿದ್ದ ಕುಮಾರಿ, ಈ ವಾರದ ಎಲಿಮಿನೇಷನ್‌ನಲ್ಲಿ ದೊಡ್ಮನೆಯಿಂದ ನಿರ್ಗಮಿಸಿದ್ದಾರೆ.

ಅಗ್ನಿಪರೀಕ್ಷೆ ಕಾರ್ಯಕ್ರಮದಲ್ಲಿ ನೇರ ನುಡಿಯ ಮೂಲಕವೇ ಜನರ ಮನಗೆದ್ದಿದ್ದ ಕುಮಾರಿ, ಅದೇ ಸ್ವಭಾವವನ್ನು ಬಿಗ್‌ಬಾಸ್ ಮನೆಯಲ್ಲೂ ಮುಂದುವರಿಸಿದ್ದರು. ಆದರೆ ಕಳೆದೊಂದು ವಾರದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಆಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಇದು ಅವರ ಆಟದ ಮೇಲೆ ಪರಿಣಾಮ ಬೀರಿದ್ದು, ಎಲಿಮಿನೇಷನ್‌ಗೆ ಹಿನ್ನಡೆಯಾಯಿತು.

ದಸರಾ ಹಬ್ಬದ ಸಂದರ್ಭದಲ್ಲಿ ಅಗ್ನಿಪರೀಕ್ಷೆಯ ಸ್ಪರ್ಧಿಗಳಾಗಿದ್ದ ಕುಮಾರಿ ಮತ್ತು ಲಕ್ಷ್ಮೀ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದರು. ಬಳಿಕ ನಡೆದ ಲೂಟಿಕೋರರು ಮತ್ತು ಸೆಕ್ಯೂರಿಟಿ ಟಾಸ್ಕ್‌ಗಳಲ್ಲಿ ಇಬ್ಬರೂ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಅದೇ ವಾರ ಲಕ್ಷ್ಮೀ ಮನೆಯಿಂದ ಹೊರಬಂದಿದ್ದರು.

ಈ ವಾರ ಆಸಿಯಾ, ಧನುಷ್, ಗಗನ್, ಕಿರಣ್ ಶಾಸ್ತ್ರಿ, ಪ್ರಶಾಂತ್, ಜಗದೀಶ್ ಮತ್ತು ಕುಮಾರಿ ನಾಮಿನೇಟ್ ಆಗಿದ್ದರು. ನಾಮಿನೇಷನ್ ಟಾಸ್ಕ್ ಬಳಿಕ ಕುಮಾರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಹೀಗಾಗಿ ಟಾಸ್ಕ್‌ಗಳಲ್ಲಿ ಅವರ ಭಾಗವಹಿಸುವಿಕೆ ಕಡಿಮೆಯಾಗಿತ್ತು. ಅಂತಿಮವಾಗಿ ಈ ವಾರ ಕುಮಾರಿ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

Related Articles

Back to top button