Kannada NewsKarnataka NewsLatest

*ಗೃಹಜ್ಯೋತಿ ಯೋಜನೆಯಿಂದ 1.41 ಲಕ್ಷ ಜನ ಹೊರಕ್ಕೆ: ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಯ ಪರೀಕ್ಷೆ ನಡೆಯುತ್ತಿದೆ. ಲಕ್ಷಾಂತರ ಜನರು ಯೋಜನೆಯಿಂದ ಹೊರ ಹೋಗಿರುವುದು ಬೆಳಕಿಗೆ ಬಂದಿದೆ.

ರಾಜ್ಯದ ಜನರಿಗೆ ಉಚಿತ ವಿದ್ಯುತ್ ನೀಡುವ ಉದ್ದೇಶದಿಂದ ಜಾರಿಗೊಳಿಸಿರುವ ಗೃಹಜ್ಯೋತಿ ಯೋಜನೆ ಬಗ್ಗೆ ಈಗ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಈ ಸಮೀಕ್ಷೆಯಲ್ಲಿ ಬರೋಬ್ಬರಿ 1.42 ಲಕ್ಷ ಜನ ಗೃಹಜ್ಯೋತಿ ಯೋಜನೆಯ ಸಮೀಕ್ಷೆಗೆ ನಿರಾಕರಣೆ ಮಾಡಿದ್ದಾರೆ

ರಾಜ್ಯದ ಮನೆಮನೆಗೂ ಉಚಿತ ವಿದ್ಯುತ್ ಸೌಲಭ್ಯ ಕಲ್ಪಿಸುವ ಗೃಹಜ್ಯೋತಿ ಯೋಜನೆ. ಇದೀಗ ಫಲಾನುಭವಿಗಳ ಸಮೀಕ್ಷೆಯ ವಿಚಾರವಾಗಿ ಗಮನ ಸೆಳೆದಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಭಾಗ್ಯಜ್ಯೋತಿ, ಕುಟೀರಜ್ಯೋತಿ ಹಾಗೂ ಅಮೃತಜ್ಯೋತಿ ಫಲಾನುಭವಿಗಳನ್ನೂ ಸೇರಿಸಿ, ಒಟ್ಟು 74,29,773 ಫಲಾನುಭವಿಗಳಿದ್ದಾರೆ. ಈ ಪೈಕಿ ಅಕ್ಟೋಬರ್ 31ರ ಅಂತ್ಯಕ್ಕೆ 73,78,352 ಫಲಾನುಭವಿಗಳ ಸಮೀಕ್ಷೆ ಪೂರ್ಣಗೊಂಡಿದೆ. ಅಂದ್ರೆ ಶೇ.99.31ರಷ್ಟು ಪ್ರಗತಿ ಸಾಧಿಸಿದಂತಾಗಿದೆ.

ಒಟ್ಟು ಫಲಾನುಭವಿಗಳು -74,29,773
ಸಮೀಕ್ಷೆ ಪೂರ್ಣಗೊಂಡವರು – 73,78,352
ಸಮೀಕ್ಷೆ ಪೂರ್ಣಗೊಂಡ ಪ್ರಮಾಣ – ಶೇ.99.31
ಸಮೀಕ್ಷೆಗೆ ನಿರಾಕರಿಸಿದವರು – 1,42,978

ಈ ಸಮೀಕ್ಷೆಯ ಅಂಕಿ-ಅಂಶಗಳಲ್ಲಿ ಗಮನ ಸೆಳೆಯುತ್ತಿರುವುದು ಸಮೀಕ್ಷೆಗೆ ಬರೋಬ್ಬರಿ 1,42,978 ಜನರು ಗೃಹಜ್ಯೋತಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ ಎಂದು ಬೆಸ್ಕಾಂನ ಅಂಕಿ-ಅಂಶಗಳು ತಿಳಿಸಿವೆ.

ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವವರೇ ಸಮೀಕ್ಷೆಗೆ ಸಹಕರಿಸಲು ಹಿಂದೇಟು ಹಾಕಿದ್ದೇಕೆ? ಗೃಹಜ್ಯೋತಿ ಯೋಜನೆಯಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದಾರಾ? ಅಥವಾ ಸಮೀಕ್ಷೆಗೆ ಸ್ಪಂದಿಸದಿರಲು ಬೇರೆ ಕಾರಣಗಳಿವೆಯಾ? ಈ ಪ್ರಶ್ನೆಗಳಿಗೆ ಸ್ಪಷ್ಟನೆ ಸಿಗಬೇಕಿದೆ.

ಒಂದೆಡೆ ಶೇ.99.31ರಷ್ಟು ಸಮೀಕ್ಷೆ ಪೂರ್ಣಗೊಂಡಿರುವುದು ಬೆಸ್ಕಾಂಗೆ ಸಮಾಧಾನ ತಂದಿದ್ದರೆ, ಮತ್ತೊಂದೆಡೆ ಸಮೀಕ್ಷೆ ನಿರಾಕರಿಸಿದವರ ಅಂಕಿ-ಅಂಶಗಳು ಕುತೂಹಲ ಮೂಡಿಸಿವೆ. ಇಲ್ಲಿ ಒಂದು ವಿಚಾರವನ್ನೂ ಗಮನಿಸಬೇಕು. ಸಮೀಕ್ಷೆಗೆ ನಿರಾಕರಿಸಿದ ಮಾತ್ರಕ್ಕೆ ಆ ಫಲಾನುಭವಿಗಳು ಗೃಹಜ್ಯೋತಿ ಯೋಜನೆಯಿಂದ ಹೊರಬಿದ್ದಿದ್ದಾರೆ ಎಂದು ಅರ್ಥವಲ್ಲ. ಸಮೀಕ್ಷೆಗೆ ನಿರಾಕರಣೆ ಮತ್ತು ಯೋಜನೆಯಿಂದ ಹೊರಗುಳಿಯುವಿಕೆ ಎರಡೂ ಬೇರೆಬೇರೆ ವಿಚಾರಗಳು. ಹೀಗಾಗಿ ಈ 1.42 ಲಕ್ಷ ಜನರ ನಿರ್ಧಾರದ ಹಿಂದಿನ ಕಾರಣವೇನು.? ಇವರಿಗೆ ಗೃಹಜ್ಯೋತಿ ಸೌಲಭ್ಯ ಮುಂದುವರಿಯುತ್ತದೆಯೇ? ಎಂಬುದರ ಬಗ್ಗೆ ಬೆಸ್ಕಾಂ ಸ್ಪಷ್ಟನೆ ನೀಡಬೇಕಿದೆ.

Related Articles

Back to top button