Karnataka NewsLatestPolitics

*ಡಿಸಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ*: *ವಾಟ್ಸಾಪ್ ಚಾಟ್ ಓದಿದ ಹೆಚ್.ಡಿ.ಕೆ*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಸಚಿವ ಶಿವಲಿಂಗೇಗೌಡ ವಿರುದ್ಧ ಲಂಚದ ಆರೋಪ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಹಾಸನ ಡಿಸಿ ಪಿಎ ಶಶಿಕಿರಣ್ ಅವರದ್ದು ಎನ್ನಲಾದ ವಾಟ್ಸಾಪ್ ಚಾಟ್ ಪ್ರಿಂಟ್​​ನ ಕುಮಾರಸ್ವಾಮಿ ಓದಿ ಹೇಳಿದ್ದು, ಇದು ಒಂದು ಜಿಲ್ಲೆ ಅಲ್ಲ. ಎಲ್ಲಾ ಕಡೆ ಇದೇ ವಾತಾವರಣ ಇದೆ. ಸಿಎಂ 10 ರೂ. ಲಂಚ ಕೇಳಿದರೂ ಫೋನ್‌ ಕರೆ ಮಾಡಿ ಅಂತಾರೆ. ಆದ್ರೆ ಇಲ್ಲಿನ ಸಚಿವರು ಗೌರವಯುತವಾಗಿ ಕೊಡಿ ಎಂದಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

ಡಿಸಿ ಅವರ ಪಿಎ ಶಶಿಕಿರಣ್​​ ಅವರ ವಾಟ್ಯಾಪ್​​ ಚಾಟ್​​ ಪ್ರಕಾರ, ಮೂರು ಕ್ರಷರ್​​ ಫೈಲ್​​ ಬಗ್ಗೆ ಚರ್ಚೆ ನಡೆದಿದೆ. ಕಳೆದ ಮೂರು ವರ್ಷದಿಂದ ನಿಮ್‌ ಹತ್ತಿರ ಎಷ್ಟು ಕೆಲಸ ಮಾಡಿಸಿದ್ದೇನೆ. ಕೇಳಿದ ಹಾಗೆ ಹಣ ಕೊಟ್ಟಿದ್ದೀನಿ, ಈಗ ಇಷ್ಟೊಂದು ಹಣ ಕೇಳ್ತಿದ್ದೀರಿ ಎಂದು ಇನ್ನೊಂದು ಕಡೆಯಿಂದ ಮೆಸೇಜ್​​ ಬಂದಿದೆ. ಅದಕ್ಕೆ ಈ ಕಡೆಯಿಂದ, ನೀವು ಕೊಡವಷ್ಟು ದುಡ್ಢನ್ನು ನಾವು ಡಿಸಿಯವರಿಗೆ ಕೊಡಬೇಕು. ಮಿಕ್ಕಿದ ಸಣ್ಣ ಹಣದಲ್ಲಿ ನಾನು ನನ್ನ ಸೆಕ್ಷನ್​ಗೆ ಹಂಚಬೇಕು. ಎಲ್ಲರಿಗೂ ಕೊಟ್ಟು ಮಿಕ್ಕೋದು ಮೂರು ನಾಮ ಮಾತ್ರ ಎಂದಿದ್ದಾರೆ.

ಏಪ್ರಿಲ್​​ ಅಲ್ಲಿ ಒಂದು ಕೆಲಸಕ್ಕೆ ಹಠ ಹಿಡಿದು 15 ಲಕ್ಷ ಇಸ್ಕೊಂಡ್ರು. ಕೇಳಿದ್ರೆ ಡಿಸಿ ಮೇಡಂ ಒಂದು ರೂಪಾಯಿ ಕಡಿಮೆ ಆದರೂ ಆಗಲ್ಲ ಅಂತಾರೆ. ಇನ್ನೇನು ಡಿಸಿ ಮೇಡಂ ತಾನು ಇಸ್ಕೋತೀನಿ ಎಂದು ಪ್ರೆಸ್​​ಮೀಟ್​​ ಮಾಡಿ ಹೇಳ್ತಾರಾ? ಹಿಂದೆ ಇದ್ದ ಸತ್ಯಭಾಮ ಅವರೇ ಪರವಾಗಿಲ್ಲ. ಸ್ವಲ್ಪ ಮಾತ್ರ ಕೆಲಸ ಹೇಳೋರು. ದುಡ್ಡು ಅಷ್ಟೇ ಕಡಿಮೆ. ಈ ಡಿಸಿ ಬಂದಮೇಲೆ ನಮಗೂ ಖರ್ಚು ಮಾಡಿ ಸಾಕಾಗಿದೆ ಎಂದು ಹೇಳಿದ್ದು ಕೂಡ ಚಾಟ್​​ಗಳಲ್ಲಿವೆ.

ಆಗ ಇನ್ನೊಂದು ಕಡೆಯವರು, ಅವೆಲ್ಲ ಬಿಡಿ ಸರ್​​. ಆ ಮೂರು ಫೈಲ್​ದು ಒಂದು ಫೈನಲ್​​ ಅಮೌಂಟ್​​ ಹೇಳಿ ಎಂದಿದ್ದಾರೆ. ಅದಕ್ಕೆ ಹೇಳಿದ್ನಲ್ಲ ಹೋದ ವಾರವೇ, ಒಟ್ಟು 60 ಲಕ್ಷ ಕೊಡೋದಿದ್ದರೆ ಮಾತಾಡಿ. ಇಲ್ಲಂದ್ರೆ ಹಿಂಸೆಕೊಡಬೇಡಿ ಎಂದು ಇವರು ಹೇಳಿದ್ದಾರೆ. ಸಚಿವರು, ಸಂದರ ಬಳಿ ಬೇಕಿದ್ರೆ ಹೇಳಿಸುತ್ತೀನಿ ಎಂದಿದ್ದಕ್ಕೆ, ಶಿವಲಿಂಗೇಗೌಡರು ಡಿಸಿ ಬದಲಾವಣೆ ಮಾಡಿಸ್ತೀನಿ ಅಂತಿದ್ದರು. ಕೊನೆಗೆ ಡಿಸಿ ಮೇಡಂ ಅರಸೀಕೆರೆ ತಹಶೀಲ್ದಾರ್​​ ಸಂತೋಷ್​​ ಕಡೆ ಮಾತಾಡಿಸಿ 75 ಲಕ್ಷ ಕೊಟ್ಟು ಸುಮ್ಮನಿರಿಸಿದ್ದು. ಆ ಹಣವನ್ನು ನಾನು ಎಲ್ಲೆಲ್ಲೋ ಹೊಂದಿಸಿ ಕೊಟ್ಟುಬಂದೆ ಎಂದು ಹೇಳಿರುವುದು ಇದರಲ್ಲಿವೆ ಎಂದು ಕುಮಾರಸ್ವಾಮಿ ವಾಟ್ಸಾಪ್ ಚಾಟ್ ಓದಿ ಹೇಳಿದ್ದಾರೆ.

ಈ ಎಲ್ಲ ದಾಖಲೆಗಳನ್ನು ಯಾರೋ ಒಬ್ಬರು ಕೊಟ್ಟು ಹೋಗಿದ್ದಾರೆ. ಈ ರೀತಿ ಪ್ರತಿ ಜಿಲ್ಲೆಗಳಲ್ಲಿಯೂ ನಡೆಯುತ್ತಿದೆ. ಈ ಚಾಟ್​​ಗಳ ಬಗ್ಗೆ ಡಿಜಿ ಮತ್ತು ಐಜಿಪಿ ಡಾ.ಎಂ.ಎ.ಸಲೀಂ ಅವರು ತನಿಖೆ ಮಾಡಿಸ್ತಾರಾ? ಯಾರು ಈ ಮಧ್ಯವರ್ತಿಗಳು? ಯಾರ್ಯಾರಿಗೆ ದುಡ್ಡು ಹೋಗ್ತಿದೆ? ಹಾಸನಕ್ಕೆ ಬಂದ ಸಿಎಂ ಈ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಈ ಬಗ್ಗೆ ಕಡಿವಾಣ ಹಾಕ್ತಾರೋ ಇಲ್ಲವೋ ಎಂದು ಕೇಳಬೇಕಿದೆ. ಇಂತಹ ವಿಚಾರವನ್ನು ಮಾತನಾಡಿ ಮಾತನಾಡಿ ಬೇಸರ ಆಗಿದೆ. ಯಾರೂ ಅನ್ಯತಾ ಭಾವಿಸಬೇಡಿ. ಸರ್ಕಾರದಲ್ಲಿ ಏನು ನಡೆಯುತ್ತಿದೆ ಅದನ್ನು ಜನರ ಮುಂದೆ ಇಟ್ಟಿದ್ದೇನೆ ಎಂದು ಹೇಳಿದರು.

Related Articles

Back to top button