BusinessKannada NewsKarnataka NewsLatest

*ಆಭರಣ ಪ್ರಿಯರಿಗೆ ಗುಡ್ ನ್ಯೂಸ್*: *ಚಿನ್ನದ ಬೆಲೆ ಮತ್ತಷ್ಟು ಇಳಿಕೆ*

ಪ್ರಗತಿವಾಹಿನಿ ಸುದ್ದಿ: ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ. ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತತೆ ಮತ್ತು ಹೂಡಿಕೆದಾರರ ಚಟುವಟಿಕೆಗಳ ಪರಿಣಾಮ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದೆ.

ಇಂದಿನ ವಹಿವಾಟಿನಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ ₹490 ಕುಸಿತ ದಾಖಲಾಗಿದೆ. ಇದರೊಂದಿಗೆ ಬಂಗಾರದ ದರ ₹1.25 ಲಕ್ಷದ ಮಟ್ಟಕ್ಕೆ ಇಳಿದಿದೆ. ಇತ್ತ, ಕಳೆದ ಕೆಲವು ದಿನಗಳಿಂದ ಸತತವಾಗಿ ಕುಸಿಯುತ್ತಿದ್ದ ಬೆಳ್ಳಿ ಬೆಲೆ ಇಂದು ಸ್ಥಿರವಾಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರದ ಬಗ್ಗೆ ಇಲ್ಲಿದೆ ಮಾಹಿತಿ

24 ಕ್ಯಾರೆಟ್‌ ಚಿನ್ನ: 1 ಗ್ರಾಂ – ₹12,508 10 ಗ್ರಾಂ – ₹1,25,080 ಇಳಿಕೆ – ₹490

22 ಕ್ಯಾರೆಟ್‌ ಚಿನ್ನ: 1 ಗ್ರಾಂ – ₹11,465 10 ಗ್ರಾಂ – ₹1,14,650 ಇಳಿಕೆ – ₹450

18 ಕ್ಯಾರೆಟ್‌ ಚಿನ್ನ: 1 ಗ್ರಾಂ – ₹9,381 10 ಗ್ರಾಂ – ₹93,810 ಇಳಿಕೆ – ₹370

ನವೆಂಬರ್‌ 21ರಂದು 24 ಕ್ಯಾರೆಟ್‌ ಶುದ್ಧ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹49 ಇಳಿಕೆಯಾಗಿದೆ. ಇದರಿಂದ ಒಂದು ಗ್ರಾಂ ಚಿನ್ನದ ಬೆಲೆ ₹12,508ಕ್ಕೆ ತಲುಪಿದೆ. ಇನ್ನು 10 ಗ್ರಾಂ ಚಿನ್ನದ ದರದಲ್ಲಿ ₹490 ಕಡಿತವಾಗಿದ್ದು, ಪ್ರಸ್ತುತ ₹1,25,080ಕ್ಕೆ ಮಾರಾಟವಾಗುತ್ತಿದೆ.

22 ಕ್ಯಾರೆಟ್‌ ಚಿನ್ನದ ಬೆಲೆ

ಆಭರಣ ತಯಾರಿಕೆಗೆ ಸಾಮಾನ್ಯವಾಗಿ ಬಳಸುವ 22 ಕ್ಯಾರೆಟ್‌ ಚಿನ್ನದ ಬೆಲೆಯೂ ಇಂದು ಇಳಿಕೆಯಾಗಿದೆ. ಪ್ರತಿ ಗ್ರಾಂಗೆ ₹45 ಕಡಿಮೆಯಾಗಿದ್ದು, ಒಂದು ಗ್ರಾಂ ಬೆಲೆ ₹11,465 ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ₹450 ಇಳಿಕೆಯಾಗಿದ್ದು, ಇಂದಿನ ದರ ₹1,14,650ಕ್ಕೆ ತಲುಪಿದೆ.

18 ಕ್ಯಾರೆಟ್‌ ಚಿನ್ನದ ಬೆಲೆ

18 ಕ್ಯಾರೆಟ್‌ ಚಿನ್ನದ ದರದಲ್ಲಿಯೂ ಇಳಿಕೆ ಮುಂದುವರಿದಿದೆ. ಪ್ರತಿ ಗ್ರಾಂಗೆ ₹37 ಕಡಿಮೆಯಾಗಿದ್ದು, ಒಂದು ಗ್ರಾಂ ಬೆಲೆ ₹9,381 ಆಗಿದೆ. 10 ಗ್ರಾಂ ಚಿನ್ನದ ಬೆಲೆಯಲ್ಲಿ ₹370 ಇಳಿಕೆಯಾಗಿದ್ದು, ಪ್ರಸ್ತುತ ₹93,810ಕ್ಕೆ ತಲುಪಿದೆ.

ಬೆಳ್ಳಿ ಬೆಲೆ ಇಂದು ಸ್ಥಿರ

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಇಳಿಕೆಯಾಗುತ್ತಿದ್ದ ಬೆಳ್ಳಿ ಬೆಲೆ ಶನಿವಾರದಂದು ಸ್ಥಿರತೆ ಕಾಯ್ದುಕೊಂಡಿದೆ. ನವೆಂಬರ್‌ 21ರಂದು ಒಂದು ಗ್ರಾಂ ಬೆಳ್ಳಿಯ ಬೆಲೆ ₹175 ಆಗಿದ್ದು, ಒಂದು ಕೆ.ಜಿ ಬೆಳ್ಳಿಯ ದರ ₹1,75,000ರಷ್ಟಿದೆ.


Related Articles

Back to top button