
ಪ್ರಗತಿವಾಹಿನಿ ಸುದ್ದಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ರಾಅಜ್ಯ ಸರ್ಕಾರ ಹೊಸ ಸರ್ಕಾರಿ ಕಾರು ವಿತರಣೆ ಮಾಡಿದೆ. ಹೊಸ ಟೊಯೊಟಾ ಫಾರ್ಚೂನರ್ (Toyota Fortuner) ಕಾರಿಗೆ ಪರಮೇಶ್ವರ್ ಕುಟುಂಬಸ್ಥರು ಪೂಜೆ ಸಲ್ಲಿಸಿದರು.
ಪೂಜೆಯ ಬಳಿಕ ಡಿಸಿಎಂ ಪರಮೇಶ್ವರ್ ಅವರೇ ಖುದ್ದಾಗಿ ಕಾರು ಚಾಲನೆ ಮಾಡಿ ಸಂತಸ ವ್ಯಕ್ತಪಡಿಸಿದರು. ಉಪಮುಖ್ಯಮಂತ್ರಿಯಾದ ಬಳಿಕ ಪರಮೇಶ್ವರ್ ಅವರಿಗೆ ಹಳೆಯ ಕಾರನ್ನೇ ನೀಡಲಾಗಿತ್ತು. ಈ ಹಿನ್ನೆಲೆ ಇದೀಗ ಅವರಿಗೆ ಹೊಸ ಸರ್ಕಾರಿ ಕಾರು ವಿತರಿಸಲಾಗಿದೆ.
ವಿಶೇಷವೆಂದರೆ, ಈ ಹಿಂದೆ ಬಳಸುತ್ತಿದ್ದ KA 50 GA 6666 ನೋಂದಣಿ ಸಂಖ್ಯೆಯನ್ನೇ ಹೊಸ ಕಾರಿಗೂ ನೀಡಲಾಗಿದೆ. ಹೊಸ ಟೊಯೊಟಾ ಫಾರ್ಚೂನರ್ ಕಾರಿಗೆ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪರಮೇಶ್ವರ್ ಅವರು ಸ್ವತಃ ಸ್ಟೇರಿಂಗ್ ಹಿಡಿದು ಕಾರು ಚಲಾಯಿಸಿದ್ದಾರೆ.



