ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ
‘ಲಾಕ್ ಡೌನ್ ಆದಾಗಿನಿಂದ ಕಷ್ಟದಲ್ಲಿರುವ ಖಾಸಗಿ ಶಾಲಾ ಕಾಲೇಜು ಶಿಕ್ಷಕರಿಗೆ ಕೆಲವೊಂದು ಶಾಲೆಗಳು ಸಂಬಳ ನೀಡಿಲ್ಲ. ಕೂಡಲೇ ಸರ್ಕಾರ ಅವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು’ ಎಂದು ಶಿಕ್ಷಕರ ಮತ್ತು ಆಡಳಿತ ಮಂಡಳಿ ಫೋರಂ ಅಧ್ಯಕ್ಷ ಎ.ಪಿ. ರಂಗನಾಥ್ ಆಗ್ರಹಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ ಶಿಕ್ಷಕರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಸರ್ಕಾರ ಮತ್ತು ಮಂತ್ರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ಈ ಕೊರೊನ ಸಂದರ್ಭದಲ್ಲಿ ಅವರ ಬಗ್ಗೆ ಕಾಳಜಿ ವಹಿಸದೆ, ಆರೋಗ್ಯ ವಿಮೆ ನೀಡದೇ ಇರುವುದನ್ನು ಖಂಡಿಸಿ ಎಸ್ಸೆಸೆಲ್ಸಿ ಪರೀಕ್ಷೆ ಮೌಲ್ಯಮಾಪನ ಕೇಂದ್ರದ ಮುಂದೆ ಜು.13 ರಂದು ಪ್ರತಿಭಟನೆ ನಡೆಸಲು ನಮ್ಮ ಸಂಘ ತೀರ್ಮಾನಿಸಿದೆ. ಈ ಕೂಡಲೇ ಅವರಿಗೆ ಆರ್ಥಿಕ ಸೌಲಭ್ಯ ನೀಡಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ‘ ಎಂದರು.
ಈ ಸಂದರ್ಭದಲ್ಲಿ ಹಾಲಸ್ವಾಮಿ ಬಿ, ವಸಂತ್ ಕುಮಾರ್, ಮೂಡಲ ಗಿರಿ ಗೌಡ, ಪ್ರಾಂಶುಪಾಲರಾದ ಕುಮಾರ್, ದೇವರಾಜು, ಆರೋಗ್ಯಪ್ಪ , ಶಿಕ್ಷಕರಾದ ಲೋಕೇಶ್, ಪ್ರೊ. ಅನಿಲ್ ಜೋಷಿ, ಹನುಮಂತರಾಜು, ಸ್ವಾಮಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ