Latest

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ಸಂಜನಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ಸಂಜನಾ ಗಲ್ರಾಣಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ.

ನಟಿ ಸಂಜನಾ ಅವರ ದಾಖಲೆಗಳಲ್ಲಿ ಅವರ ಹೆಸರು ಅರ್ಚನಾ ಎಂದಿದ್ದು, 2014ರಲ್ಲೇ ನಟಿ ಸಂಜನಾ ಇಸ್ಲಾಂ ಧರ್ಮದ ಬಗ್ಗೆ ಒಲವು ಹೊಂದಿದ್ದರು. ಇಸ್ಲಾಂ ಸಂಸ್ಕೃತಿ, ಸಂಪ್ರದಾಯ ನನಗೆ ಇಷ್ಟವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್ ಹಾಕಿದ್ದರಲ್ಲದೇ ಬುರ್ಖಾ ಧರಿಸಿದ್ದ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದರು. ಬಳಿಕ 2018ರಲ್ಲಿ ಅವರು ಇಸ್ಲಾಂ ಧರ್ಮಕ್ಕೆ ಸೇರ್ಪಡೆಯಾಗಿದ್ದರು ಎಂದು ತಿಳಿದುಬಂದಿದೆ.

Home add -Advt

ಸಂಜನಾ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಮಹಿರಾ ಎಂದು ಹೆಸರು ಬದಲಿಸಿಕೊಂಡಿದ್ದರು. ದಾರುಲ್ ಉಲೂಮ್ ಶಾ ವಲಿಯುಲ್ಲಾ ಸಂಸ್ಥೆಯಿಂದ ಸರ್ಟಿಫಿಕೇಟ್ ಕೂಡ ಸಂಜನಾಗೆ ನೀಡಲಾಗಿತ್ತು ಎನ್ನಲಾಗಿದೆ.

ಇನ್ನು ಬೆಂಗಳೂರಿನ ಅರೆಬಿಕ್ ಮದರಸದ ಧರ್ಮ ಗುರು ಮಹಮ್ಮದ್ ಜಲಾಲುದ್ದಿನ್ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಅರ್ಚನಾ ಗರ್ಲಾಣಿ 2018 ರಂದು ಇಮ್ತಿಯಾಜ್ ಅಹ್ಮದ್ ಮತ್ತು ಅಸ್ಲಂ ಪಾಷಾ ಎಂಬವರ ಜೊತೆಗೆ ಬಂದು ಇಸ್ಲಾಂನ ತತ್ವ ಆದರ್ಶಗಳನ್ನ ಒಪ್ಪಿಕೊಂಡು ಸ್ವ ಇಚ್ಛೆಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಬಂದಿದ್ದೇನೆ ಎಂದಿದ್ದರು. ಅಲ್ಲದೇ ಕೋರ್ಟ್ ಅಫಿಡವಿಟ್ ಕೂಡ ತೆಗೆದುಕೊಂಡು ಬಂದಿದ್ದರು. ನಾನೇ ಅವರ ಇಸ್ಲಾಂ ಧರ್ಮ ಸ್ವೀಕಾರ ಕಾರ್ಯ ನೆರವೇರಿಸಿದ್ದೇನೆ ಎಂದಿದ್ದಾರೆ.

Related Articles

Back to top button