ಪ್ರಗತಿವಾಹಿನಿ ಸುದ್ದಿ, ಅಥಣಿ – ಗಾಂಜಾ ಮಾರಾಟ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮೂವರನ್ನು ಜಿಲ್ಲಾ ಸಿ ಇ ಎನ್ ಅಪರಾಧ (ಡಿಸಿಬಿ) ಪೊಲೀಸರು ಬಂಧಿಸಿದ್ದಾರೆ. ಅವರಿಂದ 4 ಲಕ್ಷ ರೂ ಮೌಲ್ಯದ ಸುಮಾರು 20 ಕೆಜಿ ಗಾಂಜಾ, ಕಾರು, ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಪಂಡರಾಪುರ ಕಡೆಯಿಂದ ಅಥಣಿ ಕಡೆಗೆ ಗಾಂಜಾ ಮಾರಾಟ ಮಾಡಲು ಜತ್ತ ಮೂಲಕ ಅನಂತಪೂರ ವ್ಯಾಪ್ತಿಯಿಂದ ಹಾಯ್ದು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಸಿ ಇ ಎನ್ ಅಪರಾಧ (ಡಿಸಿಬಿ) ಪೊಲಿಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ ವಿರೇಶ ತಿ ದೊಡಮನಿ ಕಾರ್ಯಾಚರಣೆ ಆರಂಭಿಸಿದರು.
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮತ್ತು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗ ಅಮರನಾಥ ರೆಡ್ಡಿ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸಪೆಕ್ಟರ್ ವಿರೇಶ ತಿ ದೊಡಮನಿ ಇವರು ತಮ್ಮ ಠಾಣೆಯ ಸಿಬ್ಬಂದಿಯೊಂದಿಗೆ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದವನ ಮೇಲೆ ದಾಳಿ ಮಾಡಿದರು.
ರಾವಸಾಹೇಬ ಅಣ್ಣಪ್ಪ ನಂದಿವಾಲೆ (ವಯಸ್ಸು ೩೭ ವರ್ಷ ಸಾ|| ಬಿಳ್ಳೂರ ತಾ|| ಜತ್ತ ರಾಜ್ಯ ಮಹಾರಾಷ್ಟ್ರ) ಎನ್ನುವವನನ್ನು ಬಂಧಿಸಿ 40 ಸಾವಿರ ರೂ. ಮೌಲ್ಯದ ೨ ಕೆ.ಜಿ ಗಾಂಜಾ, ಹಿರೋ ಹೊಂಡಾ ಸ್ಪ್ಲೆಂಡರ ಕಂಪನಿಯ ಮೋಟರ್ ಸೈಕಲ್, ಮೊಬೈಲ್ ವಶಪಡಿಸಿಕೊಂಡು ವಿಚಾರಣೆ ನಡೆಸಿದರು.
ಈ ಗಾಂಜಾವನ್ನು ಮಹಾರಾಷ್ಟ್ರ ರಾಜ್ಯದ ಪಂಡರಪೂರ ಹತ್ತಿರದಿಂದ ತಂದಿದ್ದಾಗಿ ಆತ ತಿಳಿಸಿದ.
ಆತ ನೀಡಿದ ಮಾಹಿತಿಯಂತೆ ಮಹಾರಾಷ್ಟ್ರದ ಪಂಡರಪೂರ ಹತ್ತಿರ ಹೋಗಿ
ಸಂಗೀತಾ ದತ್ತಾತ್ರೇಯ ವಾಗಜ (ಸಾ|| ಶೇಟಪಾಳ ತಾ|| ಮೊಹೊಳ ರಾಜ್ಯ ಮಹಾರಾಷ್ಟ್ರ ) ಮತ್ತು ವಿಲಾಸ ಪಾಂಡುರಂಗ ಘಾಡಗೆ (ಸಾ|| ಅಡಿವ ತಾ|| ಪಂಡರಪೂರ ರಾಜ್ಯ ಮಹಾರಾಷ್ಟ್ರ) ಇವರನ್ನು ಬಂಧಿಸಿ ಅವರಿಂದ 18 ಕೆಜಿ 200 ಗ್ರಾಂ ಗಾಂಜಾ ಮತ್ತು ಈ ಕೃತ್ಯಕ್ಕೆ ಬಳಸುತ್ತಿದ್ದ ಹೊಂಡಾ ಸಿಟಿ ಕಾರ್ ನಂ. ಎಮ್‌ಎಚ್-12, ಡಿಎಸ್-6623 ನೇದ್ದನ್ನು ಹಾಗೂ ಗಾಂಜಾ ತೂಕ ಮಾಡಲು ಬಳಸುತ್ತಿದ್ದ ಮಶೀನ ವಶಪಡಿಸಿಕೊಳ್ಳಲಾಗಿದೆ.
ಒಟ್ಟು ಮೂರು ಜನರನ್ನು ಬಂಧಿಸಿ ಅವರಿಂದ 4 ಲಕ್ಷ ರೂ. ಮೌಲ್ಯದ ಒಟ್ಟು ೨೦ ಕೆಜಿ ಗಾಂಜಾ ಮತ್ತು 2.70 ಲಕ್ಷ ರೂ. ಮೌಲ್ಯದ ಒಂದು ಕಾರು, ಒಂದು ಮೊಟರ ಸೈಕಲ್ ವಶಪಡಿಸಿಕೊಂಡಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ದಾಳಿಯಲ್ಲಿ ಜಿಲ್ಲಾ ಸಿ ಇ ಎನ್ (ಡಿಸಿಬಿ) ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಅಶೋಕ ಹೆಚ್ ಭಜಂತ್ರಿ, ಎಎಸ್‌ಐ, ಮತ್ತು ಬಿ ಎಸ್ ಚಿನ್ನಿಕುಪ್ಪಿ, ವಾಯ್ ವಿ ಸಪ್ತಸಾಗರ, ಎಸ್ ಎ ಬೆವನೂರ, ಎನ್ ಎಲ್ ಗುಡೆನ್ನವರ, ಎಮ್ ಬಿ ಕಾಂಬಳೆ, ಇವರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ