ಲಕ್ಷ್ಮೀಬಾಯಿ ಮತ್ತು ನಾರಾಯಣಾಚಾರ್ಯ ಹೈಗ್ರೀವ
ಪ್ರಗತಿವಾಹಿನಿ ಸುದ್ದಿ, ಕೊಪ್ಪಳ: ಜೀವನ ಪೂರ್ತಿ ಪತ್ನಿಯ ಕೈ ಹಿಡಿದು ಬದುಕಿದ ವ್ಯಕ್ತಿಯೋರ್ವರು ಸಾವಿನಲ್ಲೂ ಪತ್ನಿಯ ಬೆನ್ನು ಹಿಡಿದು ಹೊರಟುಹೋದರು.
ಜಿಲ್ಲೆಯ ಕುಷ್ಟಗಿ ತಾಲೂಕಿನ ಚಿಕ್ಕಗೊಣ್ಣಾಗರ ಗ್ರಾಮದ ಲಕ್ಷ್ಮೀಬಾಯಿ ನಾ. ಹೈಗ್ರೀವ(೯೦) ಶುಕ್ರವಾರ (ದಿನಾಂಕ ೯-೧೦-೨೦೨೦ ರಂದು) ನಿಧನರಾದರು. ಅವರ ಪತಿ ಶತಾಯುಷಿ ನಾರಾಯಣಾಚಾರ್ಯ ಹೈಗ್ರೀವ(೧೦೦) ಅವರು ರವಿವಾರ (ದಿನಾಂಕ ೧೧-೧೦-೨೦೨೦ರಂದು) ನಿಧನರಾದರು.
೭ ಗಂಡುಮಕ್ಕಳು, ೨ ಹೆಣ್ಣುಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮೊಕ್ಕಳು ಹಾಗೂ ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ