ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗೋ ದೀಪ ಮತ್ತು ಅಗ್ನಿಹೋತ್ರ ಕಿಟ್ ನೀಡಿ ಆಶೀರ್ವದಿಸಿದ ಹಿರೇಮಠದ ಸ್ವಾಮೀಜಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದೀಪಾವಳಿ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಹಾಗೂ ಕಾಂಗ್ರೆಸ್ ವಕ್ತಾರರಾದ ಲಕ್ಷ್ಮಿ ಹೆಬ್ಬಾಳ್ಕರ್ ಹುಕ್ಕೇರಿ ಹಿರೇಮಠದ ಶಾಖೆಗೆ ಆಗಮಿಸಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರಿಂದ ಗೋ ದೀಪ ಮತ್ತು ಅಗ್ನಿಹೋತ್ರಿ ಕಿಟ್ ಪಡೆದು ಆಶೀರ್ವಾದವಾಗಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅಗ್ನಿಹೋತ್ರದ ಬಗ್ಗೆ ಅರಿವು ಮೂಡಿಸುವುದರ ಜೊತೆಜೊತೆಗೆ 72 ದೇಶಗಳಲ್ಲಿ ನಡೆಯುತ್ತಿರುವ ಅಗ್ನಿಹೋತ್ರ ಎಲ್ಲರೂ ಕೂಡ ಮನೆಮನೆಯಲ್ಲಿ ಮಾಡಿದರೆ ಖಂಡಿತವಾಗಿಯೂ ರೋಗದಿಂದ ಮುಕ್ತರಾಗಲು ಸಾಧ್ಯ. ಅಲ್ಲದೇ ದೀಪಾವಳಿಯ ಸಂದರ್ಭದಲ್ಲಿ ಗೋ ದೀಪವನ್ನು ಬೆಳಗಿದರೆ ಖಂಡಿತ ಪರಿಸರಕ್ಕೆ ವಿಶೇಷವಾಗಿರುವ ಲಾಭ ದೊರೆಯುತ್ತದೆ ಎಂದರು.
ಆಶೀರ್ವಾದವನ್ನು ಸ್ವೀಕರಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮಾತನಾಡಿ ಭಾರತ ಈ ಸಂಸ್ಕೃತಿ ಅಗಾಧವಾಗಿದೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ವೈಚಾರಿಕತೆಯ ಜೊತೆಜೊತೆಗೆ ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ಕಾರ್ಯವನ್ನು ಮಾಡುತ್ತಿದ್ದಾರೆ ಅವರ ಆಶೀರ್ವಾದವನ್ನು ಪಡೆದು ಧಾರ್ಮಿಕ ದೃಷ್ಟಿಕೋನದಿಂದ ನಾವು ಮುಂದೆ ಹೋಗುತ್ತೇವೆ. ಧರ್ಮದ ಆಶೀರ್ವಾದ ಧರ್ಮಗುರುಗಳ ಆಶೀರ್ವಾದ ಎತ್ತರಕ್ಕೆ ಬೆಳೆಯಲಿಕ್ಕೆ ಸಾಧ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶ್ರೀಮಠದಲ್ಲಿ ಗುರುಗಳು ನಡೆಸಿದ ಪೂಜಾಕಾರ್ಯದಲ್ಲಿ ಕೂಡಾ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭಾಗಿಯಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ