Latest

ನ್ಯಾಯಾಧೀಶರಿಗೆ 150 ಕಾಂಡೋಮ್ ಕಳಿಸಿದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಅಪ್ರಾಪ್ತ ಬಾಲಕಿ ಮೇಲಿನ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನ್ಯಾಯಾಧೀಶೆ ನೀಡಿದ್ದ ತೀರ್ಪಿಗೆ ಸಂಬಂಧಿಸಿದಂತೆ ಇದೀಗ ಅಹಮದಾಬಾದ್ ಮಹಿಳೆಯೊಬ್ಬಳು ನ್ಯಾಯಾಧೀಶರಿಗೆ 150 ಕಾಂಡೊಮ್ ಗಳನ್ನು ಕಳುಹಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್ ಮಹಿಳೆ ದೇವಿಶ್ರಿ ತ್ರಿವೇದಿ ಎಂಬುವವರು ಬಾಂಬೆ ಹೈಕೋರ್ಟ್ ನ್ಯಾಯಾದೀಶೆಯ  12 ವಿಳಾಸಗಳಿಗೆ 150 ಕಾಂಡೋಮ್ ಕಳುಹಿಸಿದ್ದಾರೆ. ಈ ಮೂಲಕ ನ್ಯಾಯಾಧೀಶರು ಇತ್ತೀಚೆಗೆ ನೀಡಿದ್ದ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನ್ಯಾಯಾಧೀಶೆ ನೀಡಿದ್ದ ತೀರ್ಪಿನಿಂದ ಅಪ್ರಾಪ್ತ ಬಾಲಕಿಗೆ ನ್ಯಾಯ ಸಿಕ್ಕಿಲ್ಲ. ಇದರಿಂದ ನ್ಯಾಯಾಧೀಶೆಯನ್ನು ಅಮಾನತುಗೊಳಿಸಬೇಕು ಎಂದು ಮಹಿಳೆ ಆಗ್ರಹಿಸಿದ್ದಾರೆ. ಮಹಿಳೆಯಾಗಿ ನಾನು ತಪ್ಪು ಮಾಡಿಲ್ಲ, ನ್ಯಾಯಾಧೀಶರಿಗೆ ಕಾಂಡೊಮ್ ಕಳಿಸಿದ ನನ್ನ ಕೆಲಸದ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ ಎಂದು ಮಹಿಳೆ ಹೇಳಿದ್ದಾರೆ.

ಇತ್ತೀಚೆಗೆ ನ್ಯಾಯಾಧೀಶೆ, ಬಾಲಕಿಯ ಸ್ತನಗಳನ್ನು ಆಕೆಯ ಉಡುಪುಗಳ ಮೇಲಿನಿಂದ ಸ್ಪರ್ಶಿಸಿದ ಮಾತ್ರಕ್ಕೆ ಅದು ಲೈಂಗಿಕ ದೌರ್ಜ್ಯನ್ಯ ಎಂದು ಪರಿಗಣಿಸಲಾಗದು. ಚರ್ಮದಿಂದ ಚರ್ಮ ಸ್ಪರ್ಶವಾಗಿದ್ದರೆ ಮಾತ್ರ ಪೋಕ್ಸೋ ಅಪರಾಧ ಎಂದು ಪರಿಗಣಿಸಲಾಗುತ್ತದೆ ಎಂದು ತೀರ್ಪು ನೀಡಿದ್ದರು. ಇದರಿಂದ ಅಪರಾಧಿ ಜೈಲುಶಿಕ್ಷೆಯಿಂದಲೇ ತಪ್ಪಿಸಿಕೊಂಡಿದ್ದ. ಈ ತೀರ್ಪಿನ ಬಗ್ಗೆ  ದೇಶಾದ್ಯಂತ  ಚರ್ಚೆ ನಡೆದಿತ್ತು. ಬಾಂಬೆ ಹೈಕೋರ್ಟ್ ನ ಈ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

Home add -Advt

Related Articles

Back to top button