Latest

ಅರಭಾವಿ ರಸ್ತೆಗಳ ಅಭಿವೃದ್ಧಿಗೆ 40 ಕೋಟಿ ರೂ. : ಶಾಸಕ ಬಾಲಚಂದ್ರ

ಪ್ರಗತಿವಾಹಿನಿ ಸುದ್ದಿ, ಗೋಕಾಕ :

ಲೋಕೋಪಯೋಗಿ ಇಲಾಖೆಯಿಂದ ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು ೪೦.೫೦ ಕೋಟಿ ರೂ.ಗಳು ಬಿಡುಗಡೆಯಾಗಿದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಎಲ್ಲ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗಿದೆ.
ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್‌ಎಚ್‌ಡಿಪಿ)ಅಡಿಯಲ್ಲಿ ಜಾಂಬೋಟಿ-ರಬಕವಿ(ಎಸ್‌ಎಚ್-೫೪) ರಸ್ತೆ ಕಿ.ಮೀ. ೯೬.೬೦ ದಿಂದ ೧೦೬.೭೫ ರವರೆಗೆ ಅರಭಾವಿ ಕ್ಷೇತ್ರದ ಬೆಟಗೇರಿ-ಗೋಸಬಾಳ-ಕೌಜಲಗಿವರೆಗಿನ ೧೦.೧೫ ಕಿ.ಮೀ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಪಡಿಸುವ ಕಾಮಗಾರಿ ನಡೆಯಲಿದೆ.

ಮೂಡಲಗಿ-ಸುಣಧೋಳಿ(ಎಂಡಿಆರ್) ರಸ್ತೆ ಕಿ.ಮೀ. ೦.೦೦ ದಿಂದ ೭.೯೦ ರ ವರೆಗೆ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಯರಗಟ್ಟಿ-ಬಬಲೇಶ್ವರ ರಸ್ತೆ ಕಾಮಗಾರಿಯಲ್ಲಿ ಯಾದವಾಡದಿಂದ ತಾಲೂಕಾ ಹದ್ದಿವರೆಗೆ ಕಿ.ಮೀ. ೩೩.೬೫ ದಿಂದ ೩೪.೯೫ ಹಾಗೂ ೩೯.೫೧ ದಿಂದ ೪೨.೪೧ ವರೆಗೆ ಒಟ್ಟು ೪.೨೦ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಒಟ್ಟು ೨೩.೫೦ ಕೋಟಿ ರೂ.ಗಳ ಅನುದಾನಕ್ಕೆ ಸರ್ಕಾರ ಮಂಜೂರಾತಿ ನೀಡಿದೆ.
೨೦೧೮-೧೯ನೇ ಸಾಲಿನ ಲೆಕ್ಕಶೀರ್ಷಿಕೆ ೫೦೫೪ ರ ಅಫೆಂಡಿಕ್ಸ್ ಇ ಯೋಜನೆಯಡಿ ೪.೯೫ ಕೋಟಿ ರೂ. ವೆಚ್ಚದಲ್ಲಿ ಬದಾಮಿ-ಗೊಡಚಿ-ಗೋಕಾಕ ಫಾಲ್ಸ್(ರಾ.ಹೆ-೧೩೪) ರಸ್ತೆ ಕಿ.ಮೀ ೯೪.೦೦ ರಿಂದ ೯೬.೪೦ ಹಾಗೂ ೯೯.೦೦ ರಿಂದ ೧೦೦.೦೦ ಕಿ.ಮೀ ವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ೩ ಕೋಟಿ ರೂ. ವೆಚ್ಚದಲ್ಲಿ ಜಾಂಬೋಟಿ-ರಬಕವಿ(ರಾ.ಹೆ-೫೪) ರಸ್ತೆ ಕಿ.ಮೀ ೧೧೭.೩೦ ರಿಂದ ೧೨೩.೨೮ ರವರೆಗೆ ರಸ್ತೆ ಅಗಲೀಕರಣ ಮತ್ತು ಸುಧಾರಣೆ ಮಾಡುವುದು.

೪.೮೦ ಕೋಟಿ ರೂ. ವೆಚ್ಚದಲ್ಲಿ ತಿಗಡಿ-ಸುಣಧೋಳಿ-ಭೈರನಟ್ಟಿ(ಜಿಮುರ) ರಸ್ತೆ ಕಿ.ಮೀ ೦.೦೦ ರಿಂದ ೬.೦೦ ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ೧.೨೫ ಕೋಟಿ ರೂ. ವೆಚ್ಚದ ಮಲ್ಲಾಪೂರ ಪಿಜಿ-ತುಕ್ಕಾನಟ್ಟಿ-ನಾಗನೂರ(ಜಿಮುರ) ರಸ್ತೆ ಕಿ.ಮೀ ೧೪.೨೩ ರಿಂದ ೧೫.೦೦ ರವರೆಗೆ ಹಾಗೂ ೧೯.೯೦ ರಿಂದ ೨೦.೩೦ ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ೩ ಕೋಟಿ ರೂ. ವೆಚ್ಚದಲ್ಲಿ ಗೋಸಬಾಳ-ಬಿಲಕುಂದಿ-ಭೈರನಟ್ಟಿ(ಜಿಲ್ಲಾ ಮುಖ್ಯ ರಸ್ತೆ) ರಸ್ತೆ ಕಿ.ಮೀ ೧೧.೪೦ ರಿಂದ ೧೫.೪೦ ರವರೆಗೆ ರಸ್ತೆ ಅಗಲೀಕರಣ ಮಾಡಿ ಸುಧಾರಣೆ ಮಾಡುವುದು. ಈ ಎಲ್ಲ ೪೦.೫೦ ಕೋಟಿ ರೂ. ವೆಚ್ಚದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button