Latest

ಸೆಲ್ಫಿ ತೆಗೆಯಲು ಹೋಗಿ ಸಮುದ್ರದಲ್ಲಿ ಕೊಚ್ಚಿ ಹೋದ ಯುವಕ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಸಮುದ್ರದ ಬಳಿ ಸೆಲ್ಫಿ ತೆಗೆಯಲು ಹೋದ ಯುವಕ ಸಮುದ್ರದ ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲಿ ನಡೆದಿದೆ.

ಕೊಪ್ಪಳ ಮೂಲದ ಅಭಿಷೇಕ್ ಹನುಮಂತ ಭೋಯಿ (25) ಮೃತ ಯುವಕ. ಅಕ್ಕನ ಮನೆಗೆಂದು ಬಂದಿದ್ದ ಯುವಕ ತಿರುಗಾಡಿಕೊಂಡು ಬರಲೆಂದು ಕುಮಟಾ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಸಮುದ್ರ ಭಾಗಕ್ಕೆ ತೆರಳಿದ್ದ. ಈ ವೇಳೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪೋಸ್ ನೀಡಲು ಹೋಗಿ ಕಾಲುಜಾರಿ ಸಮುದ್ರಕ್ಕೆ ಬಿದ್ದು, ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.

Home add -Advt

ಕುಮಟಾದ ಅಳವೆದಂಡೆ ಬಳಿ ಯುವಕನ ಶವ ಪತ್ತೆಯಾಗಿದ್ದು, ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣೆಗೂ ಕಾಂಗ್ರೆಸ್ ಸಿದ್ಧ…!

ಖ್ಯಾತ ಸಾಹಿತಿ, ಕವಿ ಡಾ.ಸಿದ್ದಲಿಂಗಯ್ಯ ಕೊರೊನಾಗೆ ಬಲಿ

Related Articles

Back to top button