ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಾರಿ ಮಳೆಯಿಂದ ಕಾಕತಿ ಬಳಿ ಮಾರ್ಕಾಂಡೇಯ ನದಿ ನೀರುಪಾಲಾಗಿದ್ದ ರೈತ ಶವವಾಗಿ ಪತ್ತೆಯಾಗಿದ್ದು, ಎರಡು ದಿನಗಳ ಬಳಿಕ ದರ್ಗಾ ಸೇತುವೆ ಬಳಿ ಮೃತದೇಹ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಮಾರ್ಕಾಂಡೇಯ ನದಿಗೆ ಕಾಕತಿ ಬಳಿ ನಿರ್ಮಿಸಿದ್ದ ಸೇತುವೆ ಬಳಿ ಕಾಲು ತೊಳೆಯಲೆಂದು ಹೋಗಿದ್ದ ರೈತ ಸಿದ್ರಾಯಿ ದೊಡ್ಡರಾಮ ಸುತಗಟ್ಟಿ ನೀರಿನ ರಭಸಕ್ಕೆ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ರೈತನಿಗಾಗಿ ಎರಡು ದಿನಗಳಿಂದ ಎನ್ ಡಿ ಆರ್ ಎಫ್ ತಂಡ ಸ್ಥಳೀಯರ ನೆರವಿನಿಂದ ಶೋಧ ನಡೆಸಿತ್ತು. ಇದೀಗ ಕಾಕತಿ ಸೇತುವೆಯಿಂದ ಮೂರು ಕೀ.ಮೀ ದೂರದಲ್ಲಿರುವ ಮತ್ತೊಂದು ಸೇತುವೆ ದರ್ಗಾ ಸೇತುವೆ ಬಳಿ ಸಿದ್ರಾಯಿ ದೊಡ್ಡರಾಮ ಶವ ಪತ್ತೆಯಾಗಿದೆ. ಶವವನ್ನು ಹೊರತೆಗೆಯಲಾಗಿದೆ.
ನೀರಿನ ಹರಿವು ಹೆಚ್ಚಿರುವಲ್ಲಿ, ಸೇತುವೆಗಳ ಮೇಲೆ ರಭಸದಿಂದ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಜನರು ಯಾವುದೇ ಸಾಹಸಕ್ಕೆ ಇಳಿಯದೇ ಎಚ್ಚರಿಕೆವಹಿಸಬೇಕು ಎಂದು ತಾಲೂಕು ಪಂಚಾಯ್ತಿ ಸದಸ್ಯ ಯಲ್ಲಪ್ಪ ಕೊಳೇಕರ ಮನವಿ ಮಾಡಿದ್ದಾರೆ.
ಚಿಕ್ಕೋಡಿಯಲ್ಲಿ ಪತ್ನಿ ಸಾವಿನ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾದ ಪತಿ, ಹೆಣ್ಣು ಮಕ್ಕಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ