Latest

29 ಸಚಿವರಿಂದ ಪ್ರಮಾಣ ವಚನ, ಈ ಬಾರಿ ಡಿಸಿಎಂ ಹುದ್ದೆ ಇಲ್ಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – 29 ನೂತನ ಸಚಿವರು ಇಂದು ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಬಾರಿ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Home add -Advt

ವಿಜಯೇಂದ್ರ, ಯೋಗೀಶ್ವರ, ಅರವಿಂದ ಬೆಲ್ಲದ, ಬಸನಗೌಡ ಪಾಟೀಲ ಯತ್ನಾಳ ಅವರು ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ನಾನು ಕಳಿಸಿರುವ ಪಟ್ಟಿಯಲ್ಲಿ ವಿಜಯೇಂದ್ರ ಹೆಸರಿಲ್ಲ. ಎಲ್ಲವನ್ನೂ ಹಿರಿಯರು ಚರ್ಚಿಸಿ ನಿರ್ಧರಿಸಿದ್ದಾರೆ. ಯಾರ ಒತ್ತಡಕ್ಕೂ ಮಣಿದಿಲ್ಲ ಎಂದು ಹೇಳಿದರು.

7 ಜನ ಒಕ್ಕಲಿಗ, 7 ಓಬಿಸಿ,  8 ಲಿಂಗಾಯತರು, 3 ಎಸ್ ಸಿ, ಒಬ್ಬ ಮಹಿಳೆ, ಒಬ್ಬ ಎಸ್ಟಿ, ಒಬ್ಬ ರಡ್ಡಿ ಸಮುದಾಯದಿಂದ ಸ್ಥಾನ ಪಡೆದಿದ್ದಾರೆ. ಹಿರಿಯರಿಗೆ ಮತ್ತು ಯುವಕರಿಗೆ ಸಮಾನ ಆದ್ಯತೆ ನೀಡಲಾಗಿದೆ.

8 ಹಿರಿಯರನ್ನು ಸಂಪುಟದಿಂದ ಕೈಬಿಡಲಾಗಿದೆ. ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ,  ಆರ್.ಶಂಕರ್, ಶ್ರೀಮಂತ ಪಾಟೀಲ ಸಹ ಸ್ಥಾನ ಪಡೆದಿಲ್ಲ.

ಬಳ್ಳಾರಿ, ಕಲಬುರಗಿ, ಹಾಸನ, ದಾವಣಗೆರೆ, ಯಾದಗಿರಿ, ರಾಮನಗರ, ಚಾಮರಾಜ ನಗರ, ಕೊಡಗು, ಚಿಕ್ಕಮಗಳೂರು, ವಿಜಯಪುರ, ಮೈಸೂರು ಜಿಲ್ಲೆಗಳಿಂದ ಯಾರೂ ಸಚಿವರಿಲ್ಲ. ಬೆಂಗಳೂರಿನ 6 ಜನರಿಗೆ ಸ್ಥಾನ ಸಿಕ್ಕಿದೆ.

ನೂತನ ಸಚಿವರ ಪಟ್ಟಿ:

1.ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2.ಆರ್.ಅಶೋಕ್- ಪದ್ಮನಾಭ ನಗರ

3.ಬಿಸಿ ಪಾಟೀಲ್ – ಹಿರೇಕೇರೂರು

4.ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ

5.ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

6.ಉಮೇಶ್ ಕತ್ತಿ- ಹುಕ್ಕೇರಿ

7.ಎಸ್.ಟಿ.ಸೋಮಶೇಖರ್- ಯಶವಂತಪುರ

8.ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

9.ಬೈರತಿ‌ ಬಸವರಾಜ – ಕೆ ಆರ್ ಪುರಂ

10.ಮುರುಗೇಶ್ ನಿರಾಣಿ – ಬಿಳಿಗಿ

11.ಶಿವರಾಂ ಹೆಬ್ಬಾರ್- ಯಲ್ಲಾಪುರ

12.ಶಶಿಕಲಾ ಜೊಲ್ಲೆ- ನಿಪ್ಪಾಣಿ

13.ಕೆಸಿ ನಾರಾಯಣ್ ಗೌಡ – ಕೆ‌ಆರ್ ಪೇಟೆ

14.ಸುನೀಲ್ ಕುಮಾರ್ – ಕಾರ್ಕಳ

15.ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ

16.ಗೋವಿಂದ ಕಾರಜೋಳ-ಮುಧೋಳ

17.ಮುನಿರತ್ನ- ಆರ್ ಆರ್ ನಗರ

18.ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ

19.ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20.ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21.ಹಾಲಪ್ಪ ಆಚಾರ್ – ಯಲ್ಬುರ್ಗ

22.ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ

23.ಕೋಟಾ ಶ್ರೀನಿವಾಸ ಪೂಜಾರಿ – ಎಂ ಎಲ್ ಸಿ

24.ಪ್ರಭು ಚೌವ್ಹಾಣ್ – ಔರಾದ್

25.ವಿ ಸೋಮಣ್ಣ – ಗೋವಿಂದ್ ರಾಜನಗರ

26.ಎಸ್ ಅಂಗಾರ-ಸುಳ್ಯ

27.ಆನಂದ್ ಸಿಂಗ್ – ಹೊಸಪೇಟೆ

28.ಸಿ ಸಿ‌ ಪಾಟೀಲ್ – ನರಗುಂದ

29.ಬಿಸಿ ನಾಗೇಶ್ – ತಿಪಟೂರು

Related Articles

Back to top button