Latest
ಮಹಾಘಟಬಂಧನ ಕರ್ನಾಟಕದಲ್ಲಿ ಮಾತ್ರ ಇದೆ -ಮುರಳೀಧರ ರಾವ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐದು ವರ್ಷದಲ್ಲಿ ಕೈಗೊಂಡ ಯೋಜನೆಗಳು ಯಶಸ್ವಿಯಾಗಿ, ಜನಮೆಚ್ಚುಗೆ ಪಡೆದಿವೆ. ಆದ್ದರಿಂದ ದೇಶದಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಪಿ.ಮುರಳೀಧರ್ ರಾವ್ ಹೇಳಿದ್ದಾರೆ.
ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾಘಟಬಂಧನ ಕರ್ನಾಟಕ ರಾಜ್ಯದಲ್ಲಿ ಮಾತ್ರ ಇದೆ. ಬೇರೆಲ್ಲೂ ಇಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ರಾಜ್ಯ ಸಹವಕ್ತಾರ ಎ.ಹೆಚ್.ಆನಂದ, ಬಿಜೆಪಿ ಮುಖಂಡ ವಿವೇಕ ರೆಡ್ಡಿ, ಚಲುವಾದಿ ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.




