Kannada NewsKarnataka NewsLatest

ಸಿಎಂ ಬೊಮ್ಮಾಯಿ ಪ್ರವಾಸ ಪಟ್ಟಿಯಲ್ಲಿ ಹಲವು ಮಹತ್ವದ ಬದಲಾವಣೆ: ಶಾಸಕರ ಮನೆಗೆ ಭೇಟಿ

ಶಾಸಕ ಅಭಯ ಪಾಟೀಲ ಅವರ ಮನೆಗೆ ಭೇಟಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶನಿವಾರ ಮತ್ತು ಭಾನುವಾರದ ಬೆಳಗಾವಿ ಜಿಲ್ಲೆ ಪ್ರವಾಸ ಕಾರ್ಯಕ್ರಮದಲ್ಲಿ ಹಲವು ಮಹತ್ವದ ಬದಲಾವಣೆ ಮಾಡಿ ಹೊಸ ಪ್ರವಾಸ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಮುಖ್ಯವಾಗಿ, ಶನಿವಾರ ರಾತ್ರಿ ಹುನ್ನೂರು ಐಬಿ ಭೇಟಿಯನ್ನು ರದ್ಧುಪಡಿಸಲಾಗಿದ್ದು, ಹುಕ್ಕೇರಿಯಿಂದ ನೇರವಾಗಿ ಬೆಳಗಾವಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.

ಬದಲಾದ ಪಟ್ಟಿಯ ಪ್ರಕಾರ ಭಾನುವಾರ ಬೆಳಗ್ಗೆ 9 ಗಂಟೆಗೆ ಶಾಸಕ ಅಭಯ ಪಾಟೀಲ ಅವರ ಮನೆಗೆ ಭೇಟಿ ನೀಡಲಿದ್ದಾರೆ. 

ಜೊತೆಗೆ, ಸೋಮವಾರ ಹುಬ್ಬಳ್ಳಿಯಲ್ಲಿ ಕೆಎಲ್ಇ ಎಂಜಿನಿಯಂರಿಂಗ್ ಕಾಲೇಜು ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.

ಶನಿವಾರ ಸಂಜೆ ಬೆಳಗಾವಿಗೆ ಆಗಮಿಸುವ ಅವರು ಸಂಕೇಶ್ವರ ಮತ್ತು ಹುಕ್ಕೇರಿಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ರಾತ್ರಿ 7.30ಕ್ಕೆ ಸಂಕೇಶ್ವರದಲ್ಲಿ ಪುರಸಭೆ ಆಡಳಿತ ಕಚೇರಿ ಹಾಗೂ ಸಂಕೇಶ್ವರ ಹೈಟೆಕ್ ಬಸ್ ನಿಲ್ದಾಣ ಉದ್ಘಾಟಿಸುವರು.

ಅಲ್ಲಿಂದ ಹುಕ್ಕೇರಿಗೆ ತೆರಳಿ ರಾತ್ರಿ 8.30ಕ್ಕೆ ಹುಕ್ಕೇರಿ ಬಸ್ ಘಟಕ, ಬಸ್ ನಿಲ್ದಾಣ ಹಾಗೂ ಡಿಪ್ಲೋಮಾ ಕಾಲೇಜು ಉದ್ಘಾಟಿಸುವರು.

ರಾತ್ರಿ ಬೆಳಗಾವಿಯಲ್ಲಿ ವಾಸ್ತವ್ಯ ಮಾಡಿ ಭಾನುವಾರ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಭಾನುವಾರ ಬೆಳಗ್ಗೆ 9ಕ್ಕೆ ಶಾಸಕ ಅಭಯ ಪಾಟೀಲ ಅವರ ಮನೆಗೆ ಭೇಟಿ ನೀಡಲಿದ್ದಾರೆ. ನಂತರ ಶಿವಾಜಿ ಉದ್ಯಾನದಲ್ಲಿ ಇ ಲೈಬ್ರರಿ ಉದ್ಘಾಟಿಸುವರು. 9.30ಕ್ಕೆ ಮಹಾವೀರಭವನದಲ್ಲಿ ಬಿಜೆಪಿಯಿಂದ ಆಯ್ಕೆಯಾಗಿರುವ ನೂತನ ಪಾಲಿಕೆ ಸದಸ್ಯರಿಗೆ ಸನ್ಮಾನ ನೆರವೇರಿಸುವರು. 10.15ಕ್ಕೆ ಟಿಳಕವಾಡಿಯಲ್ಲಿ ವಿಕಲಚೇತನ ಮಕ್ಕಳಿಗಾಗಿ ನಿರ್ಮಾಣವಾಗಿರುವ ಮಹಾತ್ಮಾಫುಲೆ ಉದ್ಯಾನ ಉದ್ಘಾಟಿಸುವರು.

ನಂತರ 11 ಗಂಟೆಗೆ ಸಾವಗಾಂವ್ ರಸ್ತೆಯ ಸುರೇಶ ಅಂಗಡಿ ಎಜುಕೇಶನ್ ಫೌಂಡೇಶನ್ ಆವರಣದಲ್ಲಿ ದಿ. ಸುರೇಶ ಅಂಗಡಿ ಅವರ ಪುತ್ಥಳಿಯನ್ನು ಅನಾವರಣ ಮಾಡುವರು.

2 ಗಂಟೆಗೆ ಬೆಳಗಾವಿಯಿಂದ ರಸ್ತೆ ಮೂಲಕ ಗದಗ ಜಿಲ್ಲೆಗೆ ತೆರಳುವರು. ಗದಗದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನ ಆಮ್ಲಜನಕ ಉತ್ಪಾದನಾ ಘಟಕ ಹಾಗೂ 100 ಹಾಸಿಗೆಗಳ ಮೊಡ್ಯೂಲರ್ ಆಸ್ಪತ್ರೆ ಉದ್ಘಾಟಿಸುವರು. ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರಾತ್ರಿ ಹುಬ್ಬಳ್ಳಿಯಲ್ಲಿ ವಾಸ್ತವ್ಯ ಮಾಡುವರು.

ಸೋಮವಾರ ಬೆಳಗ್ಗೆ 9 ಗಂಟೆಗೆ ಕೆಎಲ್ಇ ಬಿವಿಬಿ ಕಾಲೇಜಿನ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಲ್ಲದೆ, ಕೆಎಲ್ಇ ಟೆಕ್ ಪಾರ್ಕ್ ನೂತನ ಕಟ್ಟಡ ಉದ್ಘಾಟಿಸುವರು. ನಂತರ ಹುಬ್ಬಳ್ಳಿಯಲ್ಲಿ 3 ಪೊಲೀಸ್ ಠಾಣೆಗಳ ನೂತನ ಕಟ್ಟಡ ಉದ್ಘಾಟನೆ ಸೇರಿದಂತೆ ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು 1 ಗಂಟೆಗೆ ಬೆಂಗಳೂರಿಗೆ ತೆರಳುವರು.

ಮುಖ್ಯಮಂತ್ರಿಗಳ ಬದಲಾದ ಪ್ರವಾಸ ಪಟ್ಟಿ ಇಲ್ಲಿದೆ (ಕ್ಲಿಕ್ ಮಾಡಿ) – New Doc 2021-09-23 20.51.19

 

ಬೆಳಗಾವಿ ಜಿಲ್ಲೆಯಲ್ಲಿ ಸಿಎಂ ಸರಣಿ ಕಾರ್ಯಕ್ರಮ -ಇಲ್ಲಿದೆ ಸಂಪೂರ್ಣ ವಿವರ

ಜನವರಿ 26 ರಿಂದ 5 ಜಿಲ್ಲೆಗಳಲ್ಲಿ ಗ್ರಾಮ ಸೇವಾ ಯೋಜನೆಗೆ ಚಾಲನೆ: ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button