125 ಕೋಟಿ ವಂಚಿಸಿದ ರಕ್ಷಣಾ ಇಲಾಖೆಯ ಅಧಿಕಾರಿ

 ಪ್ರಗತಿವಾಹಿನಿ ಸುದ್ದಿ, ಗುರಗಾಂವ್ – ಬಿಎಸ್‌ಎಫ್ ಅಧಿಕಾರಿಯೊಬ್ಬರು ಭಾಗಿಯಾಗಿರುವ 125 ಕೋಟಿ ರೂ. ಮೊತ್ತದ ವಂಚನೆ ಪ್ರಕರಣವೊಂದನ್ನು ಪೊಲೀಸರು ತನಿಖೆ ನಡೆಸಿ ಪತ್ತೆಮಾಡಿದ್ದಾರೆ.

ಹರಿಯಾಣದ ಗುರ್ಗಾಂವ್ ಜಿಲ್ಲೆಯ ಮನೇಸರ್‌ನಲ್ಲಿರುವ ಎನ್‌ಎಸ್‌ಜಿ ಪ್ರಧಾನ ಕಚೇರಿಯಲ್ಲಿ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ ಯಾದವ್ ಈ ಬೃಹತ್ ವಂಚನೆ ಪ್ರಕರಣದ ಆರೋಪಿಯಾಗಿದ್ದಾರೆ.

*ವಂಚಕನಾಗಿದ್ದು ಹೇಗೆ*?
ಪ್ರವೀಣ್ ಯಾದವ್ ಶೇರು ಮಾರುಕಟ್ಟೆಯಲ್ಲಿ ೬೦ ಲಕ್ಷ ರೂ. ಕಳೆದುಕೊಂಡಿದ್ದರು. ಬಳಿPಡೀ ಹಣವನ್ನು ಮರಳಿ ಸಂಪಾದಿಸುವ ಉದ್ದೇಶದಿಂದ ಅವರು ಐಪಿಎಸ್ ಅಧಿಕಾರಿಯಂತೆ ನಟಿಸಿ ಜನರಿಗೆ ಮೋಸ ಮಾಡತೊಡಗಿದ್ದರು.
ಪ್ರಸ್ತುತ ಆರೋಪಿ ಬಿಎಸ್‌ಎಫ್ ಅಧಿಕಾರಿಯಿಂದ ೧೪ ಕೋಟಿ ರೂ. ನಗದು, ಬಿಎಂಡಬ್ಲು, ಮರ್ಸಿಡಿಸ್ ಬೆಂಜ್ ಮೊದಲಾದ ಒಟ್ಟು ೭ ಐಷಾರಾಮಿ ಕಾರುಗಳು ಮತ್ತು ೧ ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುರ್ಗಾಂವ್ ಪೊಲೀಸರು ತಿಳಿಸಿದ್ದಾರೆ.

ದೇಶದ ಆರ್ಥಿಕತೆಗೆ ಭವಿಷ್ಯದಲ್ಲಿ ಕರ್ನಾಟಕದ ಕೊಡುಗೆ ದೊಡ್ಡದಾಗಿರಲಿದೆ : ಸಿಎಂ ಬಸವರಾಜ ಬೊಮ್ಮಾಯಿ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button