Kannada NewsKarnataka News

ರಾಜ್ಯಮಟ್ಟದ ಭಿತ್ತಿಚಿತ್ರ ಸ್ಪರ್ಧೆ : ಧೃತಿ ನಾಯಕ ಪ್ರಥಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ೨೦೨೧-೨೨ ನೇ ರಾಷ್ಟ್ರೀಯ ಮತದಾರರ ನಿಮಿತ್ತ ಮುಖ್ಯ ಚುನಾವಣಾ ಆಯೋಗವು ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಭಿತ್ತಚಿತ್ರ ಸ್ಪರ್ಧೆಯಲ್ಲಿ ಬೆಳಗಾವಿಯ ಜೆಜಿಐ ಸಂಸ್ಥೆ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿ ಧೃತಿ ತಿಲಕ ನಾಯಕ ಅವರು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಈ ಸ್ಪರ್ಧೆಯನ್ನು ಡಿಸೆಂಬರ್ ೩೦ರಂದು ಬೆಳಗಾವಿ ಜಿಲ್ಲಾ ಪಂಚಾಯಿತ ವಿಡಿಯೋ ಕಾನ್ಸರೆನ್ಸ್ ಸಂಭಾಂಗಣದಲ್ಲಿ ವರ್ಚುವಲ್ ಮೂಲಕ ಹಮ್ಮಿಕೊಳ್ಳಲಾಗಿತ್ತು. ಧೃತಿ ಅವರು ಮಾದರಿ ಮತದಾನ ಕೇಂದ್ರ ಆಕರ್ಷಕ ಚಿತ್ರ ಬರೆದಿದ್ದರು. ಈ ಮೊದಲು ಇವರು ತಾಲೂಕಾ ಮತ್ತು ಜಿಲ್ಲಾ ಮಟ್ಟದಲ್ಲಿ ಇದೇ ಮಾದರಿ ಚಿತ್ರ ಬರೆದು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದರು.

Home add -Advt

ಪ್ರೇಯಸಿಯ ತಾಯಿಗೆ ಕಿಡ್ನಿ ಕೊಟ್ಟ, ಬೇರೊಬ್ಬನನ್ನು ಮದುವೆಯಾದಳು

 

Related Articles

Back to top button