
ಪ್ರಗತಿವಾಹಿನಿ ಸುದ್ದಿ; ತುಮಕೂರು: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಬಿ.ತೇಜಸ್ವಿನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಗುಡಿಸಲು ಮಳೆಯಲ್ಲಿ ಕೊಚ್ಚಿ ಹೋಗಿದ್ದರಿಂದ ಗಂಜಿ ಕೇಂದ್ರದಲ್ಲಿ ವಾಸವಾಗಿದ್ದ ಪರಮೇಶ್ ಎಂಬುವವರನ್ನು ಕರೆಸಿ, ಗಂಜಿ ಕೇಂದ್ರ ಬಿಟ್ಟು ಮೂಲ ಸ್ಥಳ ಗುಂಡುದೋಪಿಗೆ ತೆರಳುವಂತೆ ಸೂಚಿಸಿ ತಹಶೀಲ್ದಾರ್ ಧಮ್ಕಿ ಹಾಕಿದ್ದರು ಎನ್ನಲಾಗಿದೆ.
ದಲಿತ ಸಮುದಾಯದ ಪರಮೇಶ್ ಎಂಬುವರಿಗೆ ನಿಂದನೆ ಹಾಗೂ ಜೀವಬೆದರಿಕೆ ಆರೋಪ ಹಿನ್ನೆಲೆಯಲ್ಲಿ ಇದೀಗ ತಹಶೀಲ್ದಾರ್ ತೇಜಸ್ವಿನಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಗುಂಡುದೋಪುವಿನಲ್ಲಿ ಮಳೆಯಿಂದಾಗಿ ಗುಡಿಸಲುಗಳೆಲ್ಲಾ ಮುಳುಗಿ ಹೋಗಿದ್ದು, ವಾಸಕ್ಕೆ ಸಾಧ್ಯವಿಲ್ಲ ಎಂದು ಪರಮೇಶ್ ಸಮಸ್ಯೆ ಹೇಳಿದ್ದರು. ಆದರೆ ತಹಶೀಲ್ದಾರ್ ತಮ್ಮನ್ನು ನಿಂದಿಸಿ ಬೆದರಿಕೆಯೊಡ್ಡಿದ್ದಾರೆ ಎಂದು ಪರಮೇಶ್ ಆರೋಪಿಸಿದ್ದಾರೆ. ಅಲ್ಲದೇ ತಮ್ಮ ಆಧಾರ್ ಕಾರ್ಡ್ ರದ್ದು ಮಾಡಿ, ಗಡಿಪಾರು ಮಾಡುವುದಾಗಿ ಬೆದರಿಕೆ ಹಾಕಿದ್ದೂ ಅಲ್ಲದೇ ರೌಡಿಶೀಟರ್ ಓಪನ್ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ ಎಂದು ತಹಶೀಲ್ದಾರ್ ತೇಜಸ್ವಿನಿ ಬೆದರಿಕೆಯೊಡ್ದುತ್ತಿರುವ ಆಡಿಯೋ ಸಾಕ್ಷ್ಯ ಕೊಟ್ಟು ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ; ASI ಅಪರಾಧಿ