Kannada NewsKarnataka NewsLatest

ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಇದೇ ಫೆ.೨೦ ರಂದು ಬೆಂಗಳೂರು ಮಹಾನಗರದ ಕೆಂಪಾಪುರ ಮುಖ್ಯ ರಸ್ತೆಯಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ ನವದೆಹಲಿಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶ್ರೀನಿವಾಸ ವರಕೇಡಿ ಅವರಿಗೆ ಸಂಸ್ಕೃತ ಸೇವಾವೃತ್ತಿ ಪ್ರಶಸ್ತಿ ನೀಡಲಾಗುವುದು.

ನಗದು ೧೦ ಸಾವಿರ ರೂ ಮತ್ತು ಪ್ರಶಸ್ತಿ ಫಲಕವನ್ನು ನೀಡಿ ಸನ್ಮಾನವನ್ನು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಡಲಿದ್ದಾರೆ.

Home add -Advt

ಈ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಇ.ದೇವನಾಥನ್, ಮಾಗಡಿ ಶಾಸಕ ಎ.ಮಂಜುನಾಥ, ಯಲಹಂಕ ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್.ವಿಶ್ವನಾಥ, ಶಿಂಧಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಮದನ್ ದೌಲತ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ಕಳೆದ ವರ್ಷ ಶ್ರೀಮಠದಿಂದ ಸಂಸ್ಕೃತ ವಾರ್ತೆ ಓದುವರಲ್ಲಿ ಅಗ್ರಗಣ್ಯರಾದ ಫಲದೇವಾನಂದ ಸಾಗರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ಅಲೌಕಿಕ ಜ್ಞಾನಮಂದಿರಕ್ಕೆ ಭೂಮಿ ಪೂಜೆ

Related Articles

Back to top button