
ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಈಸ್ಟರ್ನ್ ಏರ್ ಲೈನ್ಸ್ ವಿಮಾನ ಪತನ ಪ್ರಕರಣ ಸಂಬಂಧ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಯಾರೋ ಉದ್ದೇಶಪೂರ್ವಕವಾಗಿಯೇ ಈ ಅಪಘಾತ ಮಾಡಿದ್ದಾರೆ ಎಂದು ಸ್ಥಳದಲ್ಲಿ ಸಿಕ್ಕ ಬ್ಲಾಕ್ ಬಾಕ್ಸ್ ನಿಂದ ತಿಳಿದುಬಂದಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಬಗ್ಗೆ ಯಾವುದೇ ಸುಳಿವು ಇಲ್ಲ. ಯಾರೋ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಕೃತ್ಯ ಎಸಗಿದ್ದಾರೆ ಎಂದು ಅಮೆರಿಕ ಅಧಿಕಾರಿ ಮೂಲಗಳು ತಿಳಿಸಿವೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಹಾಗಾದರೆ ವಿಮಾನದ ಪೈಲಟ್ ನಿಂದಲೇ ಈ ಘಟನೆ ನಡೆದಿದೆಯೇ ಎಂಬ ಅನುಮಾನ ಆರಂಭವಾಗಿದೆ.
ಮಾರ್ಚ್ 21ರಂದು 133 ಪ್ರಯಾಣಿಕರನು ಹೊತ್ತೊಯ್ಯುತ್ತಿದ್ದ ಚೀನಾದ ಈಸ್ಟರ್ನ್ ಏರ್ ಲೈನ್ಸ್ ಬೋಯಿಂಗ್-737 ವಿಮಾನ ದಕ್ಷಿಣ ಪ್ರಾಂತ್ಯದ ಗುವಾಕ್ಸಿಯಲ್ಲಿ ಅಪಘಾತಕ್ಕೀಡಾಗಿತ್ತು. 133 ಜನರು ಸಾವನ್ನಪ್ಪಿದ್ದರು. ವಿಮಾನ ಬಿದ್ದ ರಭಸಕ್ಕೆ ಇಡೀ ಪರ್ವತದ ಅರಣ್ಯ ಹೊತ್ತಿ ಉರಿದಿತ್ತು.
ನಡುರಸ್ತೆಯಲ್ಲಿಯೇ ಹೊಡೆದಾಡಿಕೊಂಡ ಪ್ರತಿಷ್ಠಿತ ಶಾಲಾ ವಿದ್ಯಾರ್ಥಿನಿಯರು
ಸಂವಿಧಾನದಷ್ಟೇ ಬಸವಣ್ಣವರ ವಚನಗಳು ಹರಿತವಾಗಿವೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ