Latest

ಬೈಕ್ ಗೆ ಓಮ್ನಿ ವಾಹನ ಡಿಕ್ಕಿ; ತಂದೆ ಸಾವು, ಮಗನಿಗೆ ಗಂಭೀರ ಗಾಯ

ಪ್ರಗತಿವಾಹಿನಿ ಸುದ್ದಿ, ಪುತ್ತೂರು: ಬೆಂಗಳೂರಿಗೆ ತೆರಳಬೇಕಿದ್ದ ಮಗನಿಗೆ ಬಸ್ ಹತ್ತಿಸಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ  ಓಮ್ನಿ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತಂದೆ ಮೃತಪಟ್ಟಿದ್ದು ಮಗ ಗಂಭೀರ ಗಾಯಗೊಂಡಿದ್ದಾನೆ.

ಈ ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಘುನಾಥ ಶೆಟ್ಟಿ(55) ಮೃತಪಟ್ಟವರು. ಅವರ ಪುತ್ರ ಅನುಷ್ (25) ಗಂಭೀರ ಗಾಯಗೊಂಡಿದ್ದು ಪುತ್ತೂರು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಮಂಗಳೂರ ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ಬೆಂಗಳೂರಿನ ಉದ್ಯೋಗದಲ್ಲಿದ್ದ ಮಗ ಬೆಂಗಳೂರಿಗೆ ತೆರಳಬೇಕಿತ್ತು. ಅದಕ್ಕಾಗಿ ಬೈಕ್ ನಲ್ಲಿ ಮಗನನ್ನು ಬಿಡಲು ರಘುನಾಥ ಶೆಟ್ಟಿ ಹೊರಟಿದ್ದರು. ಈ ವೇಳೆ ಕುಂಬ್ರ ಬಳಿ ಪುತ್ತೂರು ಸಂಚಾರ ಠಾಣೆ ಸಿಬ್ಬಂದಿ ಶೀನಪ್ಪ ಎಂಬುವವರು ಚಲಾಯಿಸಿಕೊಂಡು ಬರುತ್ತಿದ್ದ ಓಮ್ನಿ ವಾಹನ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ ತಂದೆ, ಮಗ  ಇಬ್ಬರೂ ರಸ್ತೆಗೆ ಬಿದ್ದರು.

ತೀವ್ರ ಗಾಯಗೊಂಡ ಇಬ್ಬರನ್ನೂ ಚಲನಚಿತ್ರ ನಟ ಸುಂದರ ರೈ ಮಂದಾರ ಹಾಗೂ ಅವರ ಮಿತ್ರರು ಸೇರಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯದರು. ಆದರೆ ರಘುನಾಥ ಶೆಟ್ಟಿಯವರು ಮಾರ್ಗಮಧ್ಯೆಯೇ ಕೊನೆಯುಸಿರೆಳೆದರು. ಅನುಷ್ ಕಾಲಿನ ಮೂಳೆ ಮುರಿದು ಗಂಭೀರ ಗಾಯಗೊಂಡಿದ್ದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಭೀಕರ ಅಪಘಾತ; ಶಾಲಾ ಮಕ್ಕಳು ಸೇರಿ 16 ಜನರು ದುರ್ಮರಣ

Related Articles

Back to top button