Latest

ತಮ್ಮನನ್ನೇ ಹತ್ಯೆಗೈದ ಅಣ್ಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬ ಮಾತಿದೆ. ಆಸ್ತಿ ವಿಚಾರವಾಗಿ ಅಣ್ಣ ಸ್ವಂತ ತಮ್ಮನನ್ನೇ ಹತ್ಯೆಗೈದ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕಾವೇರಿಪುರಂ ನಲ್ಲಿ ನಡೆದಿದೆ.

ವಿನಯ್ ಕುಮಾರ್ (31) ಕೊಲೆಯಾದ ದುರ್ದೈವಿ. ಅಣ್ಣ ಸತೀಶ್ ತಮ್ಮ ವಿನಯ್ ಕುಮಾರ್ ನನ್ನು ಚಾಕುವಿನಿಂದ ಇರಿದು, ಬಳಿಕ ಕಟ್ಟಡದ ಮೇಲಿಂದ ತಳ್ಳಿ ಕೊಲೆಗೈದಿದ್ದಾನೆ.

Home add -Advt

ತಮ್ಮ ವಿನಯ್ ಕುಮಾರ್ ನಿಶ್ಚಿತಾರ್ಥ ನೆರವೇರಿತ್ತು. ಮುಂದಿನ ತಿಂಗಳು ಮದುವೆಗೆ ಸಿದ್ಧತೆ ಕೂಡ ನಡೆಸಲಾಗಿತ್ತು. ತಮ್ಮನ ಮದುವೆ ವಿಚಾರ ಕೇಳಿ ಅಣ್ಣ ಸತೀಶ್ ಗೆ ತೆಲೆಬಿಸಿ ಶುರುವಾಗಿದೆ. ತಮ್ಮ ಮದುವೆಯಾದರೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂದು ತಮ್ಮನನ್ನೇ ಮುಗಿಸುವ ಪ್ಲಾನ್ ಮಾಡಿದ್ದಾನೆ.

ತಮ್ಮನ ರೂಮಿಗೆ ಬಂದ ಸತೀಶ್, ಜಗಳವಾಡಿದ್ದು ಚಾಕುವಿನಿಂದ ಇರಿದು ಬಳಿಕ ಕಟ್ಟಡದಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಾನೆ. ಬಳಿಕ ಕಟ್ಟಡದಿಂದ ಕೆಳಗೆ ಬಿದ್ದು ತಮ್ಮ ಸಾವನ್ನಪ್ಪಿದ್ದಾಗಿ ಕಥೆ ಕಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ಸತೀಶ್ ನನ್ನು ಬಂಧಿಸಿದ್ದಾರೆ.

Related Articles

Back to top button