Latest

ನಾಮಪತ್ರದಲ್ಲಿ ಸಹಿ ಹಾಕಲು ಮರೆತ ಅಭ್ಯರ್ಥಿ; ಕಣದಿಂದ ಔಟ್

ಪ್ರಗತಿವಾಹಿನಿ ಸುದ್ದಿ, ಗಂಗಾವತಿ: ಮರೆಗುಳಿತನ ಮನುಷ್ಯನಿಗೆ ಎಂತೆಂಥ ಫಜೀತಿ ತಂದೊಡ್ಡುತ್ತದೆ ಎಂಬುದಕ್ಕೆ ಇಲ್ಲಿನ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ವ್ಯಕ್ತಿಯೊಬ್ಬರು ಉದಾಹರಣೆಯಾಗಿದ್ದಾರೆ.

ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ದೇವಪ್ಪ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಿನ್ನೆ ನಾಮಪತ್ರಗಳ ಕ್ರಮಬದ್ಧತೆ ಪರಿಶೀಲನೆ ವೇಳೆಗೆ ಈ ಅಭ್ಯರ್ಥಿ ತಮ್ಮ ಸಹಿ ಹಾಕುವುದನ್ನೇ ಮರೆತು ಹೋಗಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಅಭ್ಯರ್ಥಿಯ ನಾಮಪತ್ರ ಅಸಿಂಧುವಾಗಿದ್ದು ಇದೀಗ ಕಣದಿಂದಲೇ ಔಟ್ ಆಗಿದ್ದಾರೆ.

Home add -Advt

ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದ ಬೆಂಗಳೂರು ಮೂಲದ ಗೀತಾ ಎಂಬುವವರು ತಮ್ಮ ವಿಳಾಸ ದೃಢೀಕರಿಸುವ ದಾಖಲೆಗಳನ್ನು ಒದಗಿಸದ ಕಾರಣ ಅವರ ನಾಮಪತ್ರವೂ ಅಸಿಂಧುವಾಗಿದೆ.

https://pragati.taskdun.com/car-accidenthusbandwifedeathchildren-injuerd/
https://pragati.taskdun.com/acceptance-of-nomination-papers-of-bjp-candidate-ratna-mamani/
https://pragati.taskdun.com/d-k-shivakumarpressmeetbjplingayata/

Related Articles

Back to top button