Cancer Hospital 2
Beereshwara 36
LaxmiTai 5

ಎನ್‌ಡಿಎ 300ರ ಗಡಿ ದಾಟಲಿಲ್ಲ ಎಂಬ ಸುದ್ದಿ ತಿಳಿದು ಹೃದಯಾಘಾತದಿಂದ ವ್ಯಕ್ತಿ ಸಾವು

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಕಡಿಮೆ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಫಲಿತಾಂಶ ನೋಡಿ ಹುಬ್ಬಳ್ಳಿಯ ಲಿಂಗಾರಾಜ ನಗರ ನಿವಾಸಿ  ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

ಇಂದು ಲೋಕಸಭೆಯ ಚುನಾವಣೆಯ ಫಲಿತಾಂಶ ಹೊರ ಬಂದಿದೆ.‌ ಇಂಡಿಯಾ ಒಕ್ಕೂಟಕ್ಕೆ, ಸುಮಾರು 230 ಸ್ಥಾನಗಳು ಬಂದಿದೆ.‌ ಎನ್ ಡಿ ಎ ಕೂಟಕ್ಕೆ 295 ಸ್ಥಾನಗಳು ಬಂದಿದೆ.‌ ಇಂಡಿಯಾ ಮೈತ್ರಿಕೂಟಕ್ಕೆ ಬಹುಮತ ಬಾರದ ಕಾರಣ ಅಘಾತಗೊಂಡು ಶಿವಪ್ರಕಾಶ್ ಹಿರೇಮಠ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯ ಲಿಂಗರಾಜ ನಗರದಲ್ಲಿ ನಡೆದಿದೆ.

Emergency Service

ಶಿವಪ್ರಕಾಶ್ ಹಿರೇಮಠ ಕಟ್ಟಾ ಬಿಜೆಪಿ ಅಭಿಮಾನಿಯಾಗಿದ್ದರು. ಮನೆಯ ಸೋಫಾದಲ್ಲಿ ಕುಳಿತು ಟಿವಿಯಲ್ಲಿ ಫಲಿತಾಂಶ ನೋಡುತ್ತಲೆ ಶಿವಪ್ರಕಾಶ್ ಕುಸಿದು ಬಿದ್ದಿದ್ದಾರೆ.  ಎನ್‌ಡಿಎ 300 ಗಡಿ ದಾಟಲಿಲ್ಲ ಎಂದು ಸುದ್ದಿ ತಿಳಿದ ಶಿವಪ್ರಕಾಶ್ ಆಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

Bottom Add3
Bottom Ad 2