ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಎಸಿಬಿ (ಆಯಂಟಿ ಕರಪ್ಶನ್ ಬ್ಯುರೋ) ಬುಧವಾರ ಬೆಳ್ಳಂಬೆಳಗ್ಗೆ ರಾಜ್ಯದ ಕೆಲ ಸರಕಾರಿ ಅಧಿಕಾರಿಗಳು, ಸಿಬ್ಬಂದಿಯ ಚಳಿ ಬಿಡಿಸಿದೆ.
ಬೆಂಗಳೂರು ಸೇರಿದಂತೆ ರಾಜ್ಯದ ೭೫ ಕಡೆ ಅಧಿಕಾರಿಗಳ ಮನೆ, ಫಾರ್ಮ್ ಹೌಸ್, ಕಚೇರಿಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಿದ್ದು ಬೃಹತ್ ಕಾರ್ಯಾಚರಣೆ ಕೈಗೊಂಡಿದೆ.
ಒಟ್ಟು ೧೮ ಅಧಿಕಾರಿಗಳ ಮನೆ, ಕಚೇರಿ, ಫಾರ್ಮ್ ಹೌಸ್‌ಗಳ ಮೇಲೆ ದಾಳಿ ನಡೆಸಲಾಗಿದ್ದು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಮಾಹಿತಿಯ ಮೇರೆಗೆ ದಾಳಿ ಕೈಗೊಳ್ಳಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಎಸಿಬಿಯ ಒಟ್ಟು ೧೦೦ ಅಧಿಕಾರಿಗಳು ಮತ್ತು ೩೦೦ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ದಾಳಿಯ ವೇಳೆ ಕೆಲ ಅಧಿಕಾರಿಗಳ ಮನೆಯಲ್ಲಿ ಕೇಜಿಗಟ್ಟಲೆ ಬಂಗಾರ, ಬೆಳ್ಳಿಯ ಆಭರಣಗಳು, ಕಂತೆ ಕಂತೆ ಹಣ ಪತ್ತೆಯಾಗಿದೆ. ಬಾಗಲಕೋಟೆಯ ಅರಣ್ಯಾಧಿಕಾರಿಯೊಬ್ಬರ ಮನೆಯಲ್ಲಿ ಮೂರು ಕಿಲೋ ಶ್ರೀಗಂಧ ಸಹ ವಶಕ್ಕೆ ಪಡೆಯಲಾಗಿದೆ.
ಯಾರ‍್ಯಾರ ಮೇಲೆ ದಾಳಿ ?
ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಇಂಜಿನಿಯರ್ ಗಿರೀಶ್, ಹಾವೇರಿ ಎಪಿಎಂಸಿ ಅಧಿಕಾರಿ ಕೃಷ್ಣ, ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಾಲಕೃಣ ಎಚ್. ಎನ್. ಚಿಕ್ಕಮಗಳೂರಿನ ಲೋಕೋಪಯೋಗಿ ಎಇಇ ಗವಿರಂಗಪ್ಪ, ರಾಯಚೂರಿನ ಕೃಷ್ಣ ಭಾಗ್ಯ ಜಲ ನಿಗಮದ ಎಇಇ ಅಶೋಕ ರೆಡ್ಡಿ ಪಾಟೀಲ್, ದಕ್ಷಿಣ ಕನ್ನಡ ಕೆಪಿಟಿಸಿಎಲ್ ಎಇಇ ದಯಾ ಸುಂದರ ರಾಜು, ಬೆಂಗಳೂರಿನ ಹೆಚ್ಚುವರಿ ಸಾರಿಗೆ ಆಯುಕ್ತ ಜ್ಞಾನೇಂದ್ರ ಕುಮಾರ್, ಬಿಡಿಎ ಅಧಿಕಾರಿ ರಾಕೇಶ್ ಕುಮಾರ್, ಗೋಕಾಕದ ಕೌಜಲಗಿ ವಿಭಾಗದ ಎಕ್ಸಿಕ್ಯುಟಿವ್ ಇಂಜಿನಿಯರ್ ಬಸವರಾಜ ಶೇಖರರೆಡ್ಡಿ ಪಾಟೀಲಬಾದಾಮಿಯ ಆರ್‌ಎಫ್‌ಒ ಶಿವಾನಂದ ಖೇಡಗಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶ್ರೀನಿವಾಸ್, ದಾವಣಗೆರೆಯ ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ. ಗದಗ ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ ಬಸವಕುಮಾರ ಅಣ್ಣಿಗೇರಿ, ವಿಜಯಯಪುರ ನಿರ್ಮಿತಿ ಕೇಂದ್ರದ ಮ್ಯಾನೇಜರ್ ಗೋಪಿನಾಥ ಮಾಳಗಿ, ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಇಲಾಖೆಯ ಜನರಲ್ ಮ್ಯಾನೇಜರ್ ಬಿ. ಕೆ. ಶಿವಕುಮಾರ್ ಅವರು ದಾಳಿಗೊಳಗಾದ ಅಧಿಕಾರಿಗಳು.
ಬೆಳಗಾವಿ: ಭೂಸ್ವಾಧೀನ ಅಧಿಕಾರಿಗಳ ಕಚೇರಿ ಮೇಲೆ ಎಸಿಬಿ ದಾಳಿ
https://pragati.taskdun.com/national-news/twin-ips-officers-people-getting-confused/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ