Latest

*ಭೀಕರ ಅಪಘಾತ; ಆಸ್ಪತ್ರೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಪ್ರಾಣಬಿಟ್ಟ ಕಂದಮ್ಮ*

ಪ್ರಗತಿವಾಹಿನಿ ಸುದ್ದಿ; ತುಮಕೂರು: ಬುಲೆರೋ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸಾವನ್ನಪ್ಪಿದ್ದು, ತಂದೆ-ತಾಯಿಗಳ ಸ್ಥಿತಿ ಗಂಭೀರವಾಗಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ಬಳಿ ನಡೆದಿದೆ.

ತಿಪಟೂರಿನ ಕೈಮರಾದಲ್ಲಿ ಬುಲೆರೋ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ದಂಪತಿ ಹಾಗೂ ಮಗು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಿಂದಾಗಿ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಸಂಭವಿಸಿದೆ. ಇದರಿಂದ ಆಂಬುಲೆನ್ಸ್ ನಲ್ಲಿ ಮೂವರನ್ನು ಆಸ್ಪತ್ರೆಗೆ ಕರೆದೊಯ್ಯುಲು ವಿಳಂಬವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಪುಟ್ಟ ಮಗು ಮಾರ್ಗ ಮಧ್ಯೆಯೇ ಆಂಬುಲೆನ್ಸ್ ನಲ್ಲೇ ಪ್ರಾಣಬಿಟ್ಟಿದೆ.

ಮಗುವಿನ ತಂದೆ ಅಹಮದ್ ಹಾಗೂ ತಾಯಿ ರುಕ್ಸಾನಾ ಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

*ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ*

https://pragati.taskdun.com/air-india-flightfireemergency-landing/

Related Articles

Back to top button