Kannada NewsKarnataka NewsLatest

*ಶಾಲೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ; ಇನ್ನೋರ್ವ ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಶಾಲೆಯಲ್ಲಿ ಊಟ ಮಾಡುವ ಜಾಗದಲ್ಲಿ ಸಾಂಬಾರ್ ಚೆಲ್ಲಿದ್ದಕ್ಕೆ ವಿದ್ಯಾರ್ಥಿಯೋರ್ವ ಇನ್ನೋರ್ವ ವಿದ್ಯಾರ್ಥಿಗೆ ಚಾಕು ಇರಿದ ಘಟನೆ ಮಂಗಳೂರಿನ ಕೊಣಾಜೆ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಧ್ಯಾಹ್ನ ಊಟಕ್ಕೆ ಬಿಟಿದ್ದ ವೇಳೆ ಇಬ್ಬರು ವಿದ್ಯಾರ್ಥಿಗಳ ನಡುವೆ ನಡೆದ ಜಗಳ ತಾರಕ್ಕೇರಿದೆ. ಕುಳಿತುಕೊಲ್ಳುವ ಜಾಗದಲ್ಲಿ ಸಾಂಬಾರ್ ಚಲ್ಲಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಗೆ ಚಾಕುವಿನಿಂದ ಇರಿದಿದ್ದಾನೆ.

ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಮ್ದ ಪಾರಾಗಿದ್ದಾನೆ. ಜಗಳದಲ್ಲಿ ವಿದ್ಯಾರ್ಥಿ, ತನ್ನ ಸಹಪಾಠಿಯ ಎದೆಗೆ ಚಾಕು ಇರಿದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Related Articles

Back to top button