Kannada NewsKarnataka NewsLatest
*ರೀಲ್ಸ್ ಫೋಟೋಗಾಗಿ ಪ್ರೇಮಿಗಳ ಕಿರಿಕ್: ನೊಂದ ಯುವತಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಯುವ ಜನತೆ ರೀಲ್ಸ್ ನಲ್ಲಿ ತೊಡಗಿಕೊಳ್ಳುವುದೇ ಹೆಚ್ಚು. ರೀಲ್ಸ್ ಫೋಟೋ ವಿಚಾರವಾಗಿ ಪ್ರೇಮಿಗಳ ನಡುವೆ ಆರಂಭವಾದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಹೊಸಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಚೈತನ್ಯ (22) ಆತ್ಮಹತ್ಯೆಗೆ ಶರಣಾದ ಯುವತಿ. ಚೈತನ್ಯ ತನ್ನ ಗೆಳೆಯನೊಂದಿಗೆ ರೀಲ್ಸ್ ಮಾಡುತ್ತಿದ್ದಳು. ಇಬ್ಬರ ನಡುವೆ ರೀಲ್ಸ್ ಫೋಟೋ ವಿಚಾರವಾಗಿ ಜಗಳ ಶುರುವಾಗಿದೆ. ಇದೇ ವಿಚಾರವಾಗಿ ಚೈತನ್ಯ ನೇಣಿಗೆ ಕೊರಳೊಡ್ಡಿದ್ದಾಳೆ.
ಯುವತಿ ಚೈತನ್ಯ ಹೊಸಹಳ್ಲಿಯಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದಳು. ಮಗಳ ಸಾವಿನಿಂದ ತಾಯಿ ಕಂಗೆಟ್ಟಿದ್ದು, ಆಕ್ರಂದನ ಮುಗಿಲುಮುಟ್ಟಿದೆ.




