Latest

ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಏರ್ ಇಂಡಿಯಾ ಏರ್ ಲೈನ್ಸ್ ಮತ್ತೆ ಟಾಟಾ ಗ್ರೂಪ್ ಪಾಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ 20 ಸಾವಿರ ಕೋಟಿಗೆ ಏರ್ ಇಂಡಿಯಾ ಸಂಸ್ಥೆಯನ್ನು ಖರೀದಿಸಿದೆ.

ಅಧಿಕೃತ ಘೋಷಣೆ ಮಾತ್ರ ಬಾಕಿಯಿದ್ದು, ಈ ಮೂಲಕ ಏರ್ ಇಂದಿಯಾವನ್ನು ಟಾಟಾ ಗ್ರೂಪ್ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Home add -Advt

ಈ ಮೊದಲು ಟಾಟಾ ಗ್ರೂಪ್ ಇಂಡಿಯನ್ ಏರ್ ಲೈನ್ಸ್ ಆರಂಭಿಸಿತ್ತು. ಇದೀಗ ಏರ್ ಇಂಡಿಯಾವನ್ನು ಮತ್ತೆ ಖರೀದಿಸುವ ಮೂಲಕ ಮತ್ತೆ ತನ್ನ ಸುಪರ್ದಿಗೆ ಪಡೆದಿದೆ. ಈಗಾಗಲೇ ವಿಸ್ತಾರ, ಏರ್ ಏಷ್ಯಾದಲ್ಲಿ ಟಾಟಾ ಪಾಲುದಾರಿಕೆ ಹೊಂದಿದ್ದು, ಇದೀಗ ಮೂರನೇ ಏರ್ ಲೈನ್ಸ್ ಏರ್ ಇಂಡಿಯಾ ಕೂಡ ಟಾಟಾ ಒಡೆತನಕ್ಕೆ ಬಂದಿದೆ. ಈ ಮೂಲಕ ವಿಮಾನಯಾನದಲ್ಲಿ ಟಾಟಾ ಮತ್ತೆ ಪಾರುಪತ್ಯ ಸಾಧಿಸಿದೆ.

ಪ್ರಯಾಣಿಕರ ಬಸ್ ಭೀಕರ ಅಪಘಾತ; 7 ಜನರ ದುರ್ಮರಣ

Related Articles

Back to top button