Latest

28ರಂದು ಬೆಳಗಾವಿಗೆ ಪರಶುರಾಮ ರಥಯಾತ್ರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಮಾ.28ರಂದು ಬೆಳಿಗ್ಗೆ 11.30ಕ್ಕೆ ಪರಶುರಾಮ ರಥ ಯಾತ್ರೆ ಬೆಳಗಾವಿ ನಗರಕ್ಕೆ ಆಗಮಿಸಲಿದೆ.

Home add -Advt

ಈ ರಥ ಯಾತ್ರೆಯನ್ನು ಬೆಳಗಾವಿ ಜಿಲ್ಲಾ ಅಖಿಲ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಹಾಗೂ ಅದರ ಅಂಗ ಸಂಸ್ಥೆಗಳ ಪದಾಧಿಕಾರಿಗಳು  ಸ್ವಾಗತಿಸಲಿದ್ದಾರೆ. ಪ್ರಥಮ ಸ್ವಾಗತವನ್ನು ಕಿಲ್ಲಾ ಹತ್ತಿರದ ಅಶೋಕ ಸ್ಥಂಭದ ಹತ್ತಿರ ಸಮಾಜದ ವತಿಯಿಂದ ಮಾಡಲಾಗುವುದು ಎಂದು ಸಮಾಜದ ಅಧ್ಯಕ್ಷ ಎಸ್.ಎಮ್.ಕುಲಕರ್ಣಿ ತಿಳಿಸಿದ್ದಾರೆ.
ವಿಶ್ವ ಬ್ರಾಹ್ಮಣ ಮಹಾ ಪರಿಷತ್ ವತಿಯಿಂದ ಪರಶುರಾಮ ರಥ ಯಾತ್ರೆಯು ಇಡಿ ಭಾರತ ದೇಶದಲ್ಲಿ ಸಂಚರಿಸಲಿದ್ದು, ಬಾಗಲಕೋಟೆಯಿಂದ ಬೆಳಗಾವಿ ನಗರಕ್ಕೆ ಆಗಮಿಸಲಿದೆ. ಅಶೋಕ ಸ್ಥಂಭದಿಂದ ಚನ್ನಮ್ಮ ವೃತ್ತದ ಮಾರ್ಗವಾಗಿ, ಧ.ವಿ.ಸಂಭಾಜಿ ವೃತ್ತದ ಮುಖಾಂತರ ರೇಲ್ವೆ ಮೇಲ್ಸೇತುವೆ ಮಾರ್ಗವಾಗಿ ಬಸವೇಶ್ವರ ವೃತ್ತ (ಗೋವಾವೇಸ್)ದಲ್ಲಿ ಸ್ವಾಗತ ಮಾಡಿಕೊಂಡು ಮೆರವಣಿಗೆ ಮೂಲಕ ಮಹಾವೀರ ಭವನದಲ್ಲಿ ಪೂರ್ಣಕುಂಭ ಸ್ವಾಗತ ಮಾಡಲಾಗುವುದು.
ಪರಶುರಾಮ ರಥ ಯಾತ್ರೆಯ ಉದ್ಧೇಶವು ಜಗತ್ತಿನಾದ್ಯಂತ ಬ್ರಾಹ್ಮಣರ ಸಂಘಟನೆ, ಮಹಾವೀರ ಭವನದಲ್ಲಿ ಯುಗಲಪೀಠಾಧೀಶ್ವರ ಆಚಾರ್ಯರಾದ ಶ್ರೀ ರಾಜೇಶ್ವರಜೀ ಮಹಾರಾಜರಿಂದ ಉಪನ್ಯಾಸ (ಆಶೀರ್ವಚನ), ನಂತರ ರಥಯಾತ್ರೆ ಗೋವಾ ರಾಜ್ಯದ ಪಣಜಿಗೆ ಪ್ರಯಾಣ ಬೆಳೆಸುತ್ತದೆ.

Related Articles

Back to top button