Latest

ಕೆಎಂಎಫ್ ಕೇಂದ್ರ ಕಚೇರಿಗೆ ಆಂಧ್ರಪ್ರದೇಶದ ಸಚಿವೆ ಉಷಾ ಶ್ರೀಚರಣ ಭೇಟಿ

ಪ್ಗತಿವಾಹಿನಿ ಸುದ್ದಿ, ಬೆಂಗಳೂರು: ಆಂಧ್ರ ಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಷಾ ಶ್ರೀಚರಣ ಅವರು ಶನಿವಾರ ಇಲ್ಲಿನ ಕೆಎಂಎಫ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು.

ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ ಅವರು ಸಚಿವರನ್ನು ಸ್ವಾಗತಿಸಿದರು. ಇದೇ ವೇಳೆ ಸಚಿವೆ ಉಷಾ ಶ್ರೀಚರಣ ಅವರು ಗೋಪೂಜೆ ನೆರವೇರಿಸಿದರು.

Home add -Advt

ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಹಾಲು ಮಂಡಳಿಯ ಉತ್ತಮ ಬಾಂಧವ್ಯ ಮುಂದುವರೆಸುವ ಸಂಬಂಧ ಹಾಗೂ ಹಾಲಿನ ಅಗತ್ಯಕ್ಕೆ ಅನುಗುಣವಾಗಿ ಇನ್ನೂ ಹೆಚ್ಚಿನ ಹಾಲು ಪೂರೈಕೆಯ ಬೇಡಿಕೆಯನ್ನು ಉಷಾ ಶ್ರೀಚರಣ ಕೆಎಂಎಫ್‍ ಮುಂದಿಟ್ಟರು.

200, 500, ಹಾಗೂ 1000 ಮಿಲಿ ಪೊಟ್ಟಣ, ಟೆಟ್ರಾಪ್ಯಾಕ್, ಪ್ಲೆಕ್ಸಿ ಪೊಟ್ಟಣಗಳಲ್ಲಿ ಪೂರೈಕೆಯ ಕಾರ್ಯ, ಕೆಎಂಎಫ್ ಹಾಗೂ ಹಾಲು ಒಕ್ಕೂಟಗಳ ಕಾರ್ಯಚಟುವಟಿಕೆಗಳ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ  ಪಡೆದು ಮಹಾಮಂಡಳದ ಪ್ರಗತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಆಂಧ್ರಪ್ರದೇಶ ಸರಕಾರದ ಪ್ರತಿಷ್ಠಿತ ಯೋಜನೆಯಾದ ವೈಎಸ್‍ಆರ್ ಸಂಪೂರ್ಣ ಪೋಷಣ ಯೋಜನೆಯು ನವೆಂಬರ್-2016 ರಲ್ಲಿ 13 ಲಕ್ಷ ಲೀಟರ್ ಹಾಲಿನೊಂದಿಗೆ ಆರಂಭಗೊಂಡು ಹಂತ-ಹಂತವಾಗಿ 13 ಜಿಲ್ಲೆಗಳಿಗೆ ವ್ಯಾ್ತಿ ವಿಸ್ತರಿಸಿದೆ. ಈ ಜಿಲ್ಲೆಗಳ 55,600 ಅಂಗನವಾಡಿ ಕೇಂದ್ರಗಳಿಂದ 26 ಲಕ್ಷ ಫಲಾನುಭವಿಗಳಿಗೆ ಪ್ರತಿ ತಿಂಗಳು 1 ಕೋಟಿ ಲೀಟರ್ ಹಾಲನ್ನು ಕೆಎಂಎಫ್‍ನಿಂದ ಪೂರೈಕೆ ಮಾಡಲಾಗುತ್ತಿದೆ. ಕೆಎಂಎಫ್‍ನ ನಂದಿನಿ ಯುಎಚ್‍ಟಿ ಹಾಲನ್ನು ಆಂಧ್ರ ಪ್ರದೇಶಕ್ಕೆ ಸರಬುರಾಜು ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ಕೆಎಮ್‍ಎಫ್‍ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಅಂಬುಜಾ ಸಿಮೆಂಟ್ಸ್ ಅಧ್ಯಕ್ಷರಾಗಿ ಗೌತಮ್ ಅದಾನಿ ನೇಮಕ; ಪುತ್ರ ಕರಣ್ ACC ಅಧ್ಯಕ್ಷ

Related Articles

Back to top button