
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಕೊರೊನಾ ಸೋಂಕು ಗುಣಮುಖವಾಗಲು ಆಯುರ್ವೇದ ಔಷಧ ನೀಡುತ್ತಿದ್ದ ಆನಂದಯ್ಯ ಅವರಿಗೆ ಆಂಧ್ರಪ್ರದೇಶ ಸರ್ಕಾರ ಅನುಮತಿ ನೀಡಿದೆ.
ಕೊರೊನಾ ಸೋಂಕಿಗೆ ನಾಟಿ ಔಷಧ ನೀಡುತ್ತಿದ್ದ ಆಂಧ್ರದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆನಂದಯ್ಯ ದೇಶಾದ್ಯಂತ ಸಂಚಲನ ಮೂಡಿಸಿದ್ದರು. ಆನಂದಯ್ಯ ಅಯುರ್ವೇದಿಕ್ ಔಷಧಕ್ಕೆ ಜನರು ಮುಗಿಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೇ ಭಾರಿ ಚರ್ಚೆಗೂ ಗ್ರಾಸವಾಗಿತ್ತು.
ಇದೀಗ ಈ ಔಷಧದ ಬಗ್ಗೆ ಆಯುಷ್ ಸಚಿವಾಲಯದ ಕೇಂದ್ರೀಯ ಆಯುರ್ವೇದ ಪರಿಶೋಧನ ಸಂಸ್ಥೆ ಸಮಿತಿ ಆನಂದಯ್ಯ ಔಷಧದಿಂದ ಯಾವುದೆ ಅಪಾಯವಿಲ್ಲ. ಆದರೆ ಕಣ್ಣಿಗೆ ಹಾಕುವ ಡ್ರಾಪ್ ಸಧ್ಯಕ್ಕೆ ನೀಡುವಂತಿಲ್ಲ ಎಂದು ಷರತ್ತು ವಿಧಿಸಿ ಅನುಮತಿ ನೀಡಿದೆ. ಇದೇ ವೇಳೆ ಆನಂದಯ್ಯ ಆಯುರ್ವೇದ ಔಷಧದಿಂದ ಕೊರೊನಾ ಸೋಂಕು ಗುಣಮುಖವಾಗಲಿದೆ ಎಂಬುದನ್ನು ಸಮಿತಿ ಒಪ್ಪಿಲ್ಲ. ಆದರೂ ಆಂಧ್ರ ಸರ್ಕಾರ ಇದೀಗ ಆನಂದಯ್ಯ ಔಷಧಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ವಿಮಾನ ದುರಂತ; ಟಾರ್ಜನ್ ಖ್ಯಾತಿಯ ನಟ ಸೇರಿ 7ಜನರ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ