Belagavi NewsBelgaum NewsKannada NewsKarnataka News

*ಪೊಲೀಸ್ ಪೇದೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಪಟ್ಟಣದ ತಹಶೀಲ್ದಾರ ಕಚೇರಿ ಆವರಣದ ಸಭಾ ಭವನ ಪಕ್ಕದ ಮರಕ್ಕೆ ಕುಡಿದ ಅಮಲಿನಲ್ಲಿ ಪೊಲೀಸ್ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಮುರಕಿಬಾಂವಿ ಗ್ರಾಮದ ಬಸನಗೌಡ ಈರಪ್ಪ ಗೌಡರ (40) ಆತ್ಮಹತ್ಯೆ ಮಾಡಿಕೊಂಡ ಪೇದೆ. ಈ ಪೇದೆ ತಾಲ್ಲೂಕಿನ ದೊಡವಾಡ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಚುನಾವಣೆ ಕರ್ತವ್ಯ‌ ಮುಗಿದ ಮೇಲೆ ರಜೆ ಪಡೆದಿದ್ದರು. ಜೀವನದಲ್ಲಿ ಜಿಗುಪ್ಸೆ ಹೊಂದಿ ಕುಡಿದ ಮತ್ತಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Home add -Advt

ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತ ಪೊಲೀಸ್ ಪೇದೆ ಪತ್ನಿ, ಸಂಬಂಧಿಕರು ಕಣ್ಣೀರಾದರು.

ಕುಡಿಯೋದ ಬಿಡಿ, ಮಕ್ಕಳು, ಮಡದಿ ಬಗ್ಗೆ ಗಮನ‌ ಕೊಡಿ, ಮಕ್ಕಳ ಶಾಲೆ ಫೀಸ್ ತುಂಬಬೇಕು ಎಂದು ಹೇಳಿದ್ದೆ. ಇದೀಗ ನೇಣಿಗೆ ಶರಣಾಗಿದ್ದಾರೆ ಎಂದು ಮೃತ ಪೇದೆ ಪತ್ನಿ ಪೊಲೀಸರ ಎದುರು ಕಣ್ಣೀರಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button