Latest

ಎಲ್ಲಿಯೂ ಬಲವಂತದ ಮತಾಂತರ ನಡೆದಿಲ್ಲ – ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿಗೂ ನನಗೂ ಯಾವುದೇ ಸಂಬಂಧವಿಲ್ಲ, ಆದರೂ ನನ್ನ ವಿರುದ್ಧ ಅವರು ಆರೋಪ ಮಾಡುತ್ತಿರುವುದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ,ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಎಂಇಎಸ್ ಪುಂಡಾಟದ ಹಿಂದೆ ಕಾಂಗ್ರೆಸ್ ಕೈವಾಡವಿದೆ, ಡಿಕೆಶಿ ಇದರ ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಎಂದು ಆರೋಪಿಸಿದ್ದ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಸಿ.ಟಿ.ರವಿ ನನ್ನ ವಿರಿದ್ಧ ಯಾಕೆ ಆರೋಪ ಮಾಡುತ್ತಿದ್ದಾರೆ? ಆತ ಸಿ.ಟಿ.ರವಿ ಅಲ್ಲ, ಪಟಾಕಿ ರವಿ. ಪಟಾಕಿ ಹಚ್ಚೋದು ಬಿಟ್ಟುಬಿಡೋದು…ಆ ಪಟಾಕಿ ರವಿಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ.

Home add -Advt

ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿದ ಡಿ.ಕೆ.ಶಿವಕುಮಾರ್, ಎಲ್ಲಿಯೂ ಬಲವಂತದ ಮತಾಂತರ ನಡೆದಿಲ್ಲ, ಅಶಾಂತಿ ಮೂಡಿಸಲೆಂದು ಕಾಯ್ದೆ ಜಾರಿಗೆ ಹೊರಟಿದ್ದಾರೆ. ಮಾನಸಿಕವಾಗಿ ಹಿಂಸೆ ನೀಡಲು ಇಂತ ಕೆಲಸಕ್ಕೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಮತಾಂತರ ನಿಷೇಧ ಕಾಯ್ದೆಯನ್ನು ನಾವು ವಿರೋಧಿಸುತ್ತೇವೆ. ರಾಜ್ಯಕ್ಕೆ ಇದು ಕಪ್ಪು ಚುಕ್ಕಿ ಎಂದು ಕಿಡಿಕಾರಿದರು.

 

 

ಮುಂದುವರೆದ ಶಿವಸೇನೆ ಪುಂಡಾಟ; ಕನ್ನಡಿಗರ ಮನೆಗೆ ನುಗ್ಗಿ ಥಳಿಸಿದ ಪುಂಡರು

Related Articles

Back to top button