Karnataka NewsPolitics

*ವಾಟರ್ ಬಾಟಲ್ ನೀರು ಸೇವಿಸುವ ಮುನ್ನ ಎಚ್ಚರವಿರಲಿ*

ಆಹಾರ ಇಲಾಖೆ ಶಾಕಿಂಗ್ ಮಾಹಿತಿ

ಪ್ರಗತಿವಾಹಿನಿ ಸುದ್ದಿ: ವಾಟರ್ ಬಾಟಲ್ ನಲ್ಲಿರುವ ನೀರು ಕೂಡ ಆರೋಗ್ಯಕ್ಕೆ ಹಾನಿಕಾರಕ ಎಂದು ಆಹಾರ ಇಲಾಖೆ ತಿಳಿಸಿದೆ.

Related Articles
Home add -Advt

ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಸಮರ ಸಾರಿದ್ಧ ಆಹಾರ ಇಲಾಖೆ ಇದೀಗ ವಾಟರ್ ಬಾಟಲ್ ಬಗ್ಗೆಯೂ ಎಚ್ಚರಿಕೆ ನೀಡಿದೆ. ಕೆಲ ಕಂಪನಿಗಳ ವಾಟರ್ ಬಾಟಲ್ ನಲ್ಲಿರುವ ನೀರು ಕೂಡ ಕಡಿಮೆ ಗುಣಮಟ್ಟದಿಂದ ಕೂಡಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ.

ವಾಟರ್ ಬಾಟಲ್ ಗಳಿಂದ ಪೂರೈಕೆಯಾಗುವ ನೀರು ಶೇ.50ರಷ್ಟು ಕಳಪೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತವಾಗಿವೆ ಎಂದು ತಿಳಿಸಿದೆ.

ಇದೇ ವೇಳೆ ಕೋವಾ ಕೂಡ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅಸುರಕ್ಷಿತವಾಗಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

Related Articles

Back to top button