Latest

ಸಿಡಿಲು ಬಡಿದು ರಾಜ್ಯದ ಯೋಧ ಅಸ್ಸಾಂ ನಲ್ಲಿ ಸಾವು

ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಸಿಡಿಲು ಬಡಿದು ರಾಜ್ಯದ ಯೋಧರೊಬ್ಬರು ಅಸ್ಸಾಂ ನಲ್ಲಿ ಹುತಾತ್ಮರಾದ ಘಟನೆ ಬೆಳಕಿಗೆ ಬಂದಿದೆ.

ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದ ನಿವಾಸಿ 41 ವರ್ಷದ ಅಶೋಕ್ ಮುಂಡಾ ಮೃತ ಬಿಎಸ್ ಎಫ್ ಯೋಧ. ತಡ ರಾತ್ರಿ ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಭಾರಿ ಮಳೆ ವೇಳೆಸಿಡಿಲು ಬಡಿದು ಅಶೋಕ್ ಮುಂಡಾ ಸಾವನ್ನಪ್ಪಿದ್ದಾರೆ.

ಅಶೋಕ್ ಬಿಎಸೆಫ್ ನ 31ನೇ ಬೆಟಾಲಿನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಅಸ್ಸಾಂ-ಬಾಂಗ್ಲಾ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪತ್ನಿ, ಇಬ್ಬರು ಮಕ್ಕಳನ್ನು ಅಶೋಕ್ ಅಗಲಿದ್ದಾರೆ. ನಾಳೆ ಬೆಳಿಗ್ಗೆ ಸ್ವಗ್ರಾಮಕ್ಕೆ ಅಶೋಕ್ ಪಾರ್ಥಿವ ಶರೀರ ಆಗಮಿಸುವ ನಿರೀಕ್ಷೆಯಿದೆ.

PSI ನೇಮಕಾತಿ ಅಕ್ರಮದಲ್ಲಿ ಬೆಳಗಾವಿ – Breaking News

Related Articles

Back to top button