Film & EntertainmentKannada NewsKarnataka NewsLatest

*ಶುರುವಾಯ್ತು ಭುವನ್-ಹರ್ಷಿಕಾ ಮದುವೆ ಸಂಭ್ರಮ; ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಆಮಂತ್ರಣ ನೀಡಿದ ಜೋಡಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಂದನವನದ ಮತ್ತೊಂದು ತಾರಾಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ದೀರ್ಘ ಕಾಲದ ಸ್ನೇಹಿತರಾಗಿದ್ದ ಭುವನ್ ಮತ್ತು ಹರ್ಷಿಕಾ ಪೂಣಚ್ಚ ಈಗ ಹಸೆಮಣೆ ಏರಲಿದ್ದಾರೆ.

Home add -Advt

ಆಗಸ್ಟ್ 24ರಂದು ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ “ಅಮ್ಮತಿ ಕೊಡವ ಸಮಾಜ”ದಲ್ಲಿ ಅದ್ದೂರಿ ವಿವಾಹ ನಡೆಯಲಿದೆ. ಕೊಡವ ಶೈಲಿಯಲ್ಲಿ ಭುವನ್ ಹಾಗೂ ಹರ್ಷಿಕಾ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಈಗಾಗಲೇ ಹರ್ಷಿಕಾ ಹಾಗೂ ಭುವನ್, ಚಿತ್ರರಂಗದ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ, ಆಹ್ವಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ , ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮದುವೆ ಆಮಂತ್ರಣ ನೀಡಿದ ಭುವನ್ – ಹರ್ಷಿಕಾ, ಈ ಕ್ಷಣಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಸಿನಿಮಾ ತಾರೆಯರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ರವಿಚಂದ್ರನ್, ಗಣೇಶ್ , ದೊಡ್ಡಣ್ಣ, ಶ್ರೀನಾಥ್ ಜಯಮಾಲ, ಸುಧಾರಾಣಿ, ತಾರಾ, ಮಾಲಾಶ್ರೀ, ಅನುಪ್ರಭಾಕರ್ ಅಮೂಲ್ಯ, ದಿಗಂತ್ ,ಅಶ್ವಿನಿ ಪುನೀತ್ ರಾಜ್ ಕುಮಾರ್ , ,ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ, ದುನಿಯಾ ವಿಜಯ್ ಸೇರಿದಂತೆ ಅನೇಕ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಭುವನ್ – ಹರ್ಷಿಕಾ ಜೋಡಿ ಕಾಣಿಸಿಕೊಂಡಿತ್ತು. ತಾರಾ ಜೋಡಿಯ ಮದುವೆಯಲ್ಲಿ ಚಿತ್ರರಂಗದ ಗಣ್ಯರ ಜೊತೆ ರಾಜಕೀಯ ಗಣ್ಯರು ಹೆಚ್ಚಾಗಿ ಆಗಮಿಸುವ ನಿರೀಕ್ಷೆಯಿದೆ.

Related Articles

Back to top button