Latest

ಹುಕ್ಕೇರಿ ಶ್ರೀಗಳ ಆಶೀರ್ವಾದ ಪಡೆದ ಬಳ್ಳಾರಿಯ ಸಂಸದ ವೈ ದೇವೇಂದ್ರಪ್ಪ

ಪ್ರಗತಿವಾಹಿನಿ ಸುದ್ದಿ, ಬಳ್ಳಾರಿ :

ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಗರದ ಕಲ್ಯಾಣ ಮಠಕ್ಕೆ ಭೇಟಿ ನೀಡಿದಾಗ ಬಳ್ಳಾರಿಯ ಸಂಸದರಾಗಿ ಆಯ್ಕೆಯಾದ ವೈ ದೇವೇಂದ್ರಪ್ಪ ಬಂದು ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯಮಹಾಸ್ವಾಮಿಗಳಿಂದ ಅವರಿಂದ ಆಶೀರ್ವಾದವನ್ನು ಪಡೆದರು.

Home add -Advt

ಈ ಸಂದರ್ಭದಲ್ಲಿ ಮಾತನಾಡಿರುವ ವೈ ದೇವೆಂದ್ರಪ್ಪ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಹೆಸರನ್ನು ನಾವು ಕೇಳುತ್ತಿದ್ದೇವೆ. ಅವರ ಆಶೀರ್ವಾದವನ್ನು ಪಡೆದುಕೊಳ್ಳುವ ಸದಾವಕಾಶ ನಮಗೆ ಲ‌ಭಿಸಿದ್ದು ಭಾಗ್ಯ. ಬಳ್ಳಾರಿ ಭಾಗದಲ್ಲಿ ನರೇಂದ್ರ ಮೋದಿಯವರ ನೇತೃತ್ವದಿಂದ ಇನ್ನೂ ಹೆಚ್ಚಿನ ಕಾರ್ಯವನ್ನು ಮಾಡುತ್ತೇವೆ. ಜನರಿಗಾಗಿ, ಜನರ ಬದುಕಿಗಾಗಿ ರೈತರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುತ್ತೇನೆ. ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿದ್ದಾಗ ಜನರ ಸೇವೆಯನ್ನು ಮಾಡಿ ಜನರ ಋಣವನ್ನು ತೀರಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿರುವ ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಬಳ್ಳಾರಿಯ ಮಠಾಧಿಪತಿಗಳ ಪರಿಷತ್ತು ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇದರ ನೇತೃತ್ವ ವಹಿಸಿಕೊಂಡಿರುವ ನಗರದ ಕಲ್ಯಾಣ ಸ್ವಾಮಿಮಠದ ಕಲ್ಯಾಣ ಮಹಾಸ್ವಾಮಿಗಳು, ಕೊಟ್ಟೂರು ಚಾನಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರು, ನಂದಿಪುರ ಸ್ವಾಮೀಜಿಯವರು ಸೇರಿದಂತೆ ಅನೇಕ ಮಹಾಸ್ವಾಮಿಗಳು ನಿರಂತರವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನೂತನ ಸಂಸದರು ಹೆಚ್ಚಿನ ಕಾರ್ಯವನ್ನು ಮಾಡಲಿ, ಜನರು ಕೊಟ್ಟಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Related Articles

Back to top button