Latest

ಮಹಿಳಾ ಮೇಲಧಿಕಾರಿ ಕಿರುಕುಳ; ಆತ್ಮಹತ್ಯೆಗೆ ಯತ್ನಿಸಿದ ಆರೊಗ್ಯಾಧಿಕಾರಿ

ಪ್ರಗತಿವಾಹಿನಿ ಸುದ್ದಿ; ಬಂಟ್ವಾಳ: ಪುರಸಭೆಯ ಆರೋಗ್ಯಾಧಿಕಾರಿಯೊಬ್ಬರು, ಮಹಿಳಾ ಮೇಲಧಿಕಾರಿ ಕಿರುಕುಳಕ್ಕೆ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳದ ಪುರಸಭೆ ಆರೋಗ್ಯಾಧಿಕಾರಿ ಡಾ.ರವಿಕೃಷ್ಣ ಪುಣಚ ಆತ್ಮಹತ್ಯೆಗೆ ಯತ್ನಿಸಿದವರು. 5 ತಿಂಗಳ ಹಿಂದೆ ಡಾ.ರವಿಕೃಷ್ಣ ಆರೋಗ್ಯಾಧಿಕಾರಿಯಾಗಿ ಬಂಟ್ವಾಳ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪುರಸಭೆ ಮೇಲಧಿಕಾರಿ ಲೀನಾ ಬುಟ್ಟೋ ಪ್ರತಿದಿನ ಮಾನಸಿಕ ಕಿರುಕುಳ ನೀಡುತ್ತಿದ್ದು, ಕಚೇರಿ ಸಿಬ್ಬಂದಿ ಇಕ್ಬಾಲ್ ಕೂಡ ತನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾನೆ. ಇದರಿಂದ ಮೇಲಧಿಕಾರಿ ತನಗೆ ಪ್ರತಿದಿನ ಬೈಗುಳ, ಕಿರುಕುಳ, ಅವಮಾನ ಮಾಡುತ್ತಿದ್ದು ತೀವ್ರವಾಗಿ ಮನನೊಂದಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ರವಿಕೃಷ್ಣ ಪತ್ರವೊಂದನ್ನು ಬರೆದಿಟ್ಟಿದ್ದು ತನಗಾದಂತೆ ಇನ್ಯಾರಿಗೂ ಆಗಬಾರದು ಅದಕ್ಕೆ ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಬರೆದಿಟ್ಟು ವಿಷ ಸೇವಿಸಿದ್ದಾರೆ.

Home add -Advt

ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಡಾ.ರವಿಕೃಷ್ಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Related Articles

Back to top button