Kannada NewsLatest

ಬೆಳಗಾವಿಯಲ್ಲಿ ಮತ್ತೆ ಕ್ಯಾತೆ ತೆಗೆದ ಎಂಇಎಸ್; ಕನ್ನಡ ಬಾವುಟ ತೆರವಿಗೆ ಗಡುವು ನೀಡಿದ ಪುಂಡರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ ಮುಂದುವರೆದಿದೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಪರ ಹೋರಾಟಗಾರರು ಸ್ಥಾಪಿಸಿದ್ದ ಕನ್ನಡ ಧ್ವಜ ತೆರವು ಮಾಡುವಂತೆ ಜಿಲ್ಲಾಡಳಿತಕ್ಕೆ ಗಡುವು ನೀಡಿದೆ.

ಜಿಲ್ಲಾಡಳಿತಕ್ಕೆ ಧ್ವಜ ತೆರವು ಮಾಡುವಂತೆ ಸೂಚಿಸಿರುವ ಎಂಇಎಸ್ ಮಾರ್ಚ್ 8ರವರೆಗೆ ಗಡುವು ನೀಡಿದೆ. ಈ ಬಗ್ಗೆ ಎಂಇಎಸ್ ನಾಯಕರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಮಾರ್ಚ್ 8ರೊಳಗೆ ಧ್ವಜ ತೆರವು ಮಾಡದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಲಾಗಿದೆ.

Home add -Advt

ಪಾಲಿಕೆ ಎದುರು ಅಕ್ರಮವಾಗಿ ಕನ್ನಡ ಧ್ವಜ ಹಾರಿಸಲಾಗಿದೆ. ಈ ಹಿಂದೆಯೇ ನಾವು ಪ್ರತಿಭಟನೆಗೆ ಸಜ್ಜಾಗಿದ್ದೆವು. ಆದರೆ ಜಿಲ್ಲಾಡಳಿತ ಸಮಯಾವಕಾಶ ಕೇಳಿತ್ತು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಗಡುವು ನೀಡಲಾಗಿದೆ. ಅಷ್ಟರಲ್ಲಿ ಧ್ವಜ ತೆರವುಗೊಳಿಸಬೇಕು ಎಂದು ಎಂಇಎಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.

 

Related Articles

Back to top button