Kannada NewsKarnataka News

ಮಹಾನಗರದ ಸ್ಥಿತಿ -ಗತಿ: ಶಾಸಕ ದ್ವಯರಿಂದ ಅವಲೋಕ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಶಾಸಕರಾದ ಅಭಯ ಪಾಟೀಲ ಹಾಗೂ ಅನಿಲ ಬೆನಕೆ ಶುಕ್ರವಾರ ಬೆಳಗಾವಿ ಮಹಾನಗರದ ಸ್ಥಿತಿಗತಿಗಳ ಕುರಿತು ಅವಲೋಕನ ಸಭೆ ನಡೆಸಿದರು.

ಮಹಾನಗರದಲ್ಲಿನ ಬೀದಿ ದೀಪಗಳ ಕುರಿತು, ತ್ಯಾಜ್ಯ ಸಂಗ್ರಹ ಕುರಿತು, ಬೀದಿ ನಾಯಿಗಳ ಕುರಿತು ಹಾಗೂ ಕೋಟೆ ಕೆರೆ ನಿರ್ವಹಣೆ ಕುರಿತು ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಅರ್ಧಕ್ಕಿಂತ ಹೆಚ್ಚು ಬೀದಿ ದೀಪಗಳು ಉರಿಯುತ್ತಿಲ್ಲ. ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಕಲ್ಲು ಎಸೆದು ಬೀದಿ ದೀಪಗಳನ್ನು ಹಾಳು ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ತೆಗದುಕೊಳ್ಳಬೇಕು. ಅಗತ್ಯವಾದರೆ ಪೊಲೀಸ್ ದೂರು ದಾಖಲಿಸಬೇಕು ಎಂದು ಅಭಯ ಪಾಟೀಲ ಸೂಚಿಸಿದರು.

ಕೊಟೆ ಕೆರೆ ನಿರ್ವಹಣೆ ಗುತ್ತಿಗೆ ಪಡೆದಿರುವ ಏಜನ್ಸಿಯವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಏಪ್ರಿಲ್ ನಿಂದ ಬೇರೆಯವರಿಗೆ ಗುತ್ತಿಗೆ ನೀಡಬೇಕು ಎದು ಸೂಚಿಸಿದರು. ಸ್ವಚ್ಛತಾ ಗುತ್ತಿಗೆ ಪಡೆದವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಅವರ ಮೇಲೆ ನಿಗಾ ಇಡಬೇಕು. ಬೀದಿ ನಾಯಿಗಳಿಂದ ಬಹಳ ಸಮಸ್ಯೆಯಾಗುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಾಸಕರು ಸೂಚಿಸಿದರು.

ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ, ಪಾಲಿಕೆ ಆಯುಕ್ತ ಜಗದೀಶ ಕೆಎಚ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸ್ಲಾಪುರೆ, ಡಿಸಿಪಿ ಯಶೋದಾ ವಂಟಗೂಡೆ ಮೊದಲಾದವರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button