Latest

ಪತ್ನಿ, ಮಕ್ಕಳಿದ್ದರೂ ಪ್ರೀತಿಸಿ ಮತ್ತೊಂದು ಮದುವೆಯಾಗಿ ವಂಚಿಸಿದ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಮೊದಲ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಹೇಳಿ ಮೊದಲ ಪತ್ನಿ ಇಬ್ಬರು ಮಕ್ಕಳು ಇರುವಾಗಲೇ 2ನೇ ಮದುವೆಯಾಗಿ ಆಕೆಯಿಂದ ಚಿನ್ನಾಭರಣ, ಹಣ ದೋಚಿ ವಂಚಿಸಿರುವ ಬಿಜೆಪಿ ಮುಖಂಡನ ಕರಾಳ ಮುಖವಾಡ ಬಯಲಾಗಿದೆ.

ಹುಬ್ಬಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಬಿಜೆಪಿ ಮುಖಂಡ ಬಸವರಾಜ ಕೇಲಗೆರಿ ಎಂಬಾತ ಮೊದಲ ಪತ್ನಿ ಇರುವಾಗಲೇ ಆಕೆಗೆ ಗೊತ್ತಿಲ್ಲದಂತೆ ಇನ್ನೋರ್ವಳನ್ನು ಪ್ರೀತಿಸಿ 2012ರಲ್ಲಿ 2ನೇ ಮದುವೆಯಾಗಿದ್ದಾನೆ. ಕೆಲ ವರ್ಷ ಮೊದಲ ಪತ್ನಿಗೆ ಗೊತ್ತಾಗದಂತೆಯೇ ಎರಡನೇ ಪತ್ನಿ ಜತೆ ಕಾಲ ಕಳೆದಿದ್ದಾನೆ. ಬಳಿಕ 2ನೇ ಪತ್ನಿ ಹೆಸರಲ್ಲಿದ್ದ ಸೈಟ್ ಮಾರಿಸಿ 28 ಲಕ್ಷ ಹಣ, ಆಕೆಯ ಒಡವೆ ಪಡೆದು ವಂಚಿಸಿದ್ದಾನೆ. ನಂತರ ಮೊದಲನೇ ಪತ್ನಿ ಮಕ್ಕಳ ಜತೆ ಬಂದು ವಾಸವಾಗಿದ್ದಾನೆ.

Home add -Advt

ಬಸವರಾಜ್ ನಿಂದ ತಾನು ಮೋಸ ಹೋಗಿರುವುದು ಗೊತ್ತಾಗುತ್ತಿದ್ದಂತೆ ಕೊನೇ ಪಕ್ಷ ತನ್ನ 28 ಲಕ್ಷ ಹಣವನ್ನಾದರೂ ವಾಪಸ್ ನೀಡುವಂತೆ ಎರಡನೇ ಪತ್ನಿ ಕೇಳಿದ್ದಾಳೆ. ಹಣ ಕೊಡುವುದಾಗಿ ಮನೆಗೆ ಕರೆದ ಬಸವರಾಜ್, ಮನೆ ಬಳಿ ಬಂದ 2ನೇ ಪತ್ನಿಯನ್ನು ತನ್ನ ಮಕ್ಕಳೊಂದಿಗೆ ಸೇರಿ ರಸ್ತೆಯಲ್ಲಿ ಎಳೆದಾಡಿ ಹಿಗ್ಗಾಮುಗ್ಗ ಥಳಿಸಿದ್ದಾನೆ. ನಡುರಸ್ತೆಯಲ್ಲೇ ಮಹಿಳೆಯ ಮೇಲೆ ಹಲ್ಲೆ ನಡೆಸಿ ಒದಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ.

ತನಗಾದ ವಂಚನೆ ಮೋಸದ ಬಗ್ಗೆ 2ನೇ ಪತ್ನಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಹಾಗೂ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡರೂ ರಾಜಕೀಯ ಪ್ರಭಾವದಿಂದಾಗಿ ಇನ್ನೂ ಬಸವರಾಜ್ ನನ್ನು ಬಂಧಿಸಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕೆ ಆರೋಪಿಸಿದ್ದಾರೆ.

Related Articles

Back to top button