Belagavi NewsBelgaum NewsKarnataka News

*ಬೆಳಗಾವಿ: ಗಾಂಜಾ ಪ್ರಕರಣದಲ್ಲಿ ಮೂವರು ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಎರಡು ಪ್ರತ್ಯೇಕ ಅಕ್ರಮ ಮಾದಕ ವಸ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ ಒಂದು ಕೆಜಿಗೂ ಅಧಿಕ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಬಂಧಿತರನ್ನು ಉಮೇಶ್ ಸುರೇಶ್ ಉರುಬಿನಟ್ಟಿ, ವರ್ಧನ ಅನಂತ ಕಾಂಬಳೆ, ಪಾರ್ಥ ರಮೇಶ್ ಗೋವೇಕರ್ ಎಂದು ಗುರುತಿಸಲಾಗಿದೆ. ಆರೋಪಿ ಉಮೇಶ್ ಬೆಳಗಾವಿಯ ಭರತೇಶ್ ಶಾಲೆಯ ಎದುರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಾರ್ಕೆಟ್ ಠಾಣೆ ಪಿಎಸ್ ಐ ವಿಠಲ ಹಾವನ್ನವರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ, 20 ಸಾವಿರ ಮೌಲ್ಯದ ಗಾಂಜಾ, 4090 ರೂ ನಗದು ಹಣ ಒಂದು ಮೊಬೈಲ್ ನ್ನು ವಶಕ್ಕೆ ಪಡೆದಿದ್ದಾರೆ.

ಇನ್ನಿಬ್ಬರು ಆರೋಪಿಗಳಾದ ವರ್ಧನ ಹಾಗೂ ಪಾರ್ಥ ಬೆಳಗಾವಿಯ ಪೀರನವಾಡಿ ಗ್ರಾಮದ ಜನತಾ ಪ್ಲಾಟ್ ಬಳಿ ಸಾರ್ವಜನಿಕ ಜಾಗದಲ್ಲಿ ಅಕ್ರಮಾವಾಗಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಪಿಎಸ್ ಐ ಆದಿತ್ಯ ರಾಜನ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 6,800 ರೂ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.

ಒಟ್ಟು ಮೂವರು ಆರೋಪಿಗಳಿಂದ 26,800 ರೂ ಮೌಲ್ಯದ 1 ಕೆಜಿ 207 ಗ್ರಾಂ ಗಾಂಜಾ, 20,490 ರೂ ನಗದು ಹಣ, ಒಂದು ಮೊಬೈಲ್ ಸೇರಿದಂತೆ 52,890 ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button