Belagavi NewsBelgaum NewsKarnataka News

*ಬೆಳಗಾವಿ: ವಿದ್ಯಾರ್ಥಿಗೆ ಚಾಕು ಇರಿದು ಪರಾರಿಯಾದ ಯುವಕರ ಗುಂಪು*

ಪ್ರಗತಿವಾಹಿನಿ ಸುದ್ದಿ: ಬಸ್ ನಲ್ಲಿ ಕಿಟಕಿ ಬದಿ ಸೀಟಿಗಾಗಿ ಅಪರಿಚಿತ ಯುವಕರು ಹಾಗೂ ವಿದ್ಯಾರ್ಥಿ ನಡುವೆ ಜಗಳ ಶುರುವಾಗಿ ವಿದ್ಯಾರ್ಥಿಗೆ ಯುವಕರು ಚಾಕುವಿನಿಂದ ಇರಿದು ಪರಾರುಯಾಗಿರುವ ಘಟನೆ ನಡೆದಿದೆ.

ಪಂತಬಾಳೆಕುಂದ್ರಿ-ಸಿಬಿಟಿ ಬಸ್ ನಲ್ಲಿ ಬೆಳಗಾವಿ ನಗರಕ್ಕೆ ವಿದ್ಯಾರ್ಥಿ ಬರುತ್ತಿದ ಈ ವೇಳೆ ವಿದ್ಯಾರ್ಥಿ ಹಾಗೂ ಯುವಕರ ನಡುವೆ ಕಿಟಕಿ ಸೀಟ್ ಗಾಗಿ ಗಲಾಟೆ ಆರಂಭವಾಗಿದೆ. ಇದೇ ವಿಚಾರಕ್ಕೆ ಯುವಕರ ಗುಂಪು ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಪರರೌಯಾಗಿದ್ದಾರೆ.

ಗಂಭೀರವಾಗಿ ಹಲ್ಲೆಗೊಳಗಾಗಿರುವ ಯುವಕನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಜ್ ರಸೀದ್ ಸನದಿ (19) ಚಾಕು ಇರಿತದಿಂದ ಗಾಯಗೊಂಡಿರುವ ವಿದ್ಯಾರ್ಥಿ. ಯುವಕರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

https://pragativahini.com/lokayukta-raid-bbmp-officer-arrested

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button